ಬೈಲಹೊಂಗಲ : ತಾಲೂಕಿನ ನಯಾನಗರ ಸೇತುವೆ ಹತ್ತಿರ ಬುಧವಾರ ರಾತ್ರಿ ನಡೆದ ಅಪಘಾತದಲ್ಲಿ ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಬೆಳವಡಿಯ ಮಹೇಶ ಶಿವಪುತ್ರಪ್ಪ ಕರೀಕಟ್ಟಿ (32) ಎಂದು ಗುರುತಿಸಲಾಗಿದೆ.
ಬುಲೇರ್ ವಾಹನ ಓವರ್ ಟೆಕ್ ಮಾಡುವಾಗ ಡಿಕ್ಕಿ ಹೊಡೆದು ಮೋಟಾರ ಬೈಕ್ ಸವಾರ ಕಬ್ಬು ಸಾಗಿಸುವ ಟ್ರಕ್ ಗಾಲಿಯೊಳಗೆ ಸಿಲುಕಿ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಸಿಪಿಐ ಪಂಚಾಕ್ಷರಿ ಸಾಲಿಮಠ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಸಮಾಜ ಸೇವಕ ಮಲ್ಲಿಕಾರ್ಜುನ ಗಾಣಿಗೇರ ಶವ ಸಾಗಿಸುವಲ್ಲಿ ನೆರವಾದರು.
ಈ ಕುರಿತು ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.