ಯಾವ ಟೆಂಟ್ ಮೇಳದ ಕಲಾವಿದರಿಗೂ ಕಮ್ಮಿ ಇಲ್ಲದ ಕಲಾವಿದರ ತಂಡ ಹನುಮಗಿರಿ ಮೇಳ. ಈ ಮೇಳದಲ್ಲಿ ಇರುವ ಕಲಾವಿದರಿಗೆ ಸರಿಸಾಟಿಯಾಗಿ, ತೆಂಕು ಬಡಗಿನ ಯಾವ ಮೇಳದಲ್ಲೂ ಇಲ್ಲ. ಪ್ರದರ್ಶನದ ಗುಣಮಟ್ಟ ಕೂಡ ಪ್ರಸಕ್ತ ಮೇಳಗಳ ಪೈಕಿ ಅಗ್ರಗಣ್ಯ ಸ್ಥಾನದಲ್ಲಿದೆ. ಮಾತ್ರವಲ್ಲದೆ, ವಿಶೇಷವೆಂದರೆ – ವೀಳ್ಯ ಕೂಡ ಟೆಂಟ್ ಮೇಳಗಳಿಗಿಂತ ಕಡಿಮೇ ಇದೆ.
ಕಡಿಮೆ ವೀಳ್ಯದಲ್ಲಿ ಗುಣಮಟ್ಟದ ಕಲಾವಿದರನ್ನು ಒಂದುಗೂಡಿಸಿ ಮೇಳ ಕಟ್ಟಬಹುದು. ಜೊತೆಗೆ, ಗುಣಮಟ್ಟದ ಪ್ರಸಂಗ ಆಡಿಸಿದರೆ ಶತದಿನೋತ್ಸವ ಕಾಣಬಹುದಾದ ಪ್ರೇಕ್ಷಕರ ಸಂಖ್ಯೆ ಇದೆ. ಇದು ಪೌರಾಣಿಕ ಪ್ರಸಂಗವೇ ಆದರೂ ಒಮ್ಮೆ ನೋಡಬೇಕಲ್ಲ ಎಂದು ಹಪಹಪಿಸುವ ಪ್ರೇಕ್ಷಕ ವರ್ಗವಿದೆ, ಒಮ್ಮೆ ನೋಡಿದವರು ಮತ್ತೊಮ್ಮೆ ನೋಡಬೇಕೆಂದು ಬಯಸುವ ಪ್ರದರ್ಶನ ಇವರಲ್ಲಿ ಇದೆ.ಎಲ್ಲದಕ್ಕೂ ಉದ್ಯಮ/ವ್ಯವಹಾರದ ಆಚೆಗಿನ ಇಚ್ಛಾಶಕ್ತಿ ಬೇಕು ಅಷ್ಟೆ.
(ಕೃಪೆ : ಅಂತರ್ಜಾಲ)