ರಾಂಚಿ : ಜೆಎಂಎಂ ನಾಯಕ ಹೇಮಂತ ಸೊರೇನ್ ನ. 28 ರಂದು ಜಾರ್ಖಂಡ್ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಭಾನುವಾರವೇ ರಾಜ್ಯಪಾಲ ಸಂತೋಷ ಗಂಗ್ವಾರ್ ಅವರನ್ನು ಭೇಟಿ ಮಾಡಿ ಸರಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ. ಅವರ ನೇತೃತ್ವದ ಜೆಎಂಎಂ 34 ಸ್ಥಾನ ಗೆದ್ದುಕೊಂಡಿದೆ. ಸೊರೇನ್ ಅವರು ಇರುವ ಇಂಡಿಯಾ ಮೈತ್ರಿಕೂಟ ಒಟ್ಟು 56 ಸ್ಥಾನ ಗೆದ್ದುಕೊಂಡಿದೆ. ಸೊರೇನ್ ಅವರು ಇದೀಗ ಮತ್ತೊಮ್ಮೆ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ.