ಪರ್ತ್: ಭಾರತದ ತಂಡದ ಮಾಜಿ ನಾಯಕ ಹಾಗೂ ಶ್ರೇಷ್ಠ ಬ್ಯಾಟಿಂಗ್ ತಾರೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ನಲ್ಲಿ ನೂರು ರನ್ ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ ಬಾರಿಸಿದ 30ನೇ ಶತಕ. ಈ ಮೂಲಕ ಬ್ಯಾಟಿಂಗ್ ದಂತಕಥೆ

ಡಾನ್ ಬ್ರಾಡ್ಮನ್ ಅವರ ಹೆಸರಿನಲ್ಲಿದ್ದ 29 ಶತಕಗಳನ್ನು ಹಿಂದಿಕ್ಕಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಕೊಹ್ಲಿ ಒಟ್ಟಾರೆ 81 ಶತಕ ಬಾರಿಸಿದ್ದಾರೆ. ಏಕದಿನ ಮಾದರಿಯಲ್ಲಿ 50 ಶತಕ ಬಾರಿಸಿದ ಏಕೈಕ ಬ್ಯಾಟ್ಸ್ ಮನ್ ಎಂಬ ಖ್ಯಾತಿ ಹೊಂದಿರುವ ಅವರು, ಟಿ ಟ್ವೆಂಟಿ ಮಾದರಿಯಲ್ಲಿ ಒಂದು ಸಲ ಶತಕ ಬಾರಿಸಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶತಕ ಬಾರಿಸಿದ್ದ ನಂತರ ವಿರಾಟ್ ಕೊಹ್ಲಿ ಮತ್ತೆ ಶತಕ ಬಾರಿಸಲಿಲ್ಲ. ಒಂದು ವರ್ಷದ ನಂತರ ಅವರು ಮತ್ತೊಮ್ಮೆ ಶತಕ ಬಾರಿಸುವ ಮೂಲಕ ತಮ್ಮಲ್ಲಿ ಇನ್ನೂ ಕ್ರಿಕೆಟ್ ಹಸಿವು ಇದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಭಾರತ 6 ವಿಕೆಟ್ ಗೆ 487 ರನ್ ಗಳಿಸಿದ್ದು ಆಸ್ಟ್ರೇಲಿಯಾ ಇದೀಗ 534 ರನ್ ಗಳಿಸುವ ಮೂಲಕ ಜಯಗಳಿಸಲು ಹೋರಾಡ ಬೇಕಾಗಿದೆ.