ಕಟೀಲು : ಕಟೀಲು ಮೇಳ ತಂಡಗಳು 2024-25 ಪ್ರವಾಸಿ ಋತುವಿನ ದೈನಂದಿನ ಯಕ್ಷಗಾನ ಪ್ರದರ್ಶನಗಳನ್ನು ಪ್ರಾರಂಭಿಸಿವೆ.

ಯಕ್ಷಗಾನ ಮೇಳಗಳ ಸಂಶೋಧಕ ಮತ್ತು ಕನ್ನಡ ಪುಸ್ತಕ ತೆಂಕನಾಡ ಯಕ್ಷಗಾನದ ಲೇಖಕ ಉಪ್ಪಂಗಳ ಶಂಕರನಾರಾಯಣ ಭಟ್ ಅವರು ಹೇಳುವಂತೆ , ದಾಖಲೆಯ ಪ್ರಕಾರ ಕಟೀಲು ಮೇಳವು 1867 ರಲ್ಲಿ ಪ್ರಾರಂಭವಾಯಿತು.

ಹಲವು ಶತಮಾನಗಳ ಹಳೆಯದಾದ ಕಟೀಲಿನ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯು 2024-25 ನೇ ಸಾಲಿನ ಪ್ರತಿನಿತ್ಯದ ಪ್ರವಾಸವನ್ನು ಸೋಮವಾರ ಆರಂಭಿಸಿದ್ದರಿಂದ ಕಟೀಲು ಪಟ್ಟಣದಲ್ಲಿ ಹಬ್ಬದ ವಾತಾವರಣ ನೆಲೆಸಿತ್ತು. ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಮೇಳವು ಆರು ಪ್ರದರ್ಶನ ತಂಡಗಳನ್ನು ಹೊಂದಿದೆ.

ಆರು ತಂಡಗಳ ಕಲಾವಿದರು ಒಟ್ಟಾಗಿ ಕಟೀಲು ದೇವಸ್ಥಾನದ ಮುಂಭಾಗದಲ್ಲಿ ರಾತ್ರಿಯಿಡೀ ‘ಪಾಂಡವಾಶ್ವಮೇಧ’ ಪ್ರಸಂಗ ನಡೆಸಿಕೊಟ್ಟರು. ತಂಡಗಳು ಮಂಗಳವಾರದಿಂದ ಸಂಜೆ 6 ರಿಂದ ಮಧ್ಯರಾತ್ರಿ 12.30 ರವರೆಗೆ ಅಲ್ಪಾವಧಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ಕರಾವಳಿಯ ವಿವಿಧ ಸ್ಥಳಗಳಿಗೆ ಪ್ರವಾಸ ಮಾಡಲಿದ್ದಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಆರೂ ಮೇಳಗಳ ತಿರುಗಾಟ ಸೋಮವಾರ ಸೇವೆಯಾಟದೊಂದಿಗೆ ಆರಂಭವಾಯಿತು. ದೇವಳದ ಆನುವಂಶಿಕ ಮೊಕ್ತೇಸರ, ಪ್ರಧಾನ ಅರ್ಚಕ ವಾಸುದೇವ ಆಸ್ರಣ್ಣರು ಕಲಾವಿದರಿಗೆ ಗೆಜ್ಜೆ ಹಸ್ತಾಂತರಿಸುವ ಮೂಲಕವಾಗಿ ತಿರುಗಾಟಕ್ಕೆ ಚಾಲನೆ
ನೀಡಿದರು.

ದೇವಳದ ಆಡಳಿತ ಮೊಕ್ತೇಸರ ಹಾಗೂ ಆಡಳಿತ ಮಂಡಳಿ ಅಧ್ಯಕ್ಷ ಸನತ್ ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು, ಆರೂ ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ್ ಆಸ್ರಣ್ಣ, ಶ್ರೀ ಹರಿನಾರಾಯಣ ದಾಸ ಆಸ್ರಣ್ಣ, ತಾಂತ್ರಿಕ ತಂತ್ರಿ ವೇದ, ಹರಿ
ಉಡುಪ ಮೂಡುಮನೆ, ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ರಮನಾಥ ರೈ, ಕಟೀಲು ಶ್ರೀದುರ್ಗಾಪರಮೇಶ್ವರಿ ಯಕ್ಷಧರ್ಮ ಬೋಧಿನಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಆಚಾರ್‌ಬಜೆ, ಬಿಪಿನ್ ಪ್ರಸಾದ್ ಶೆಟ್ಟಿ, ಭುವನಾಭಿರಾಮ ಉಡುಪ, ಅತ್ತೂರು ಮತ್ತು ಕೊಡೆತ್ತೂರು ಮಾಗಣೆಯ ಗ್ರಾಮಸ್ಥರು ಹಾಗೂ ಗಣ್ಯರು ಮತ್ತಿತರರಿದ್ದರು.

ಗೆಜ್ಜೆ ಮುಹೂರ್ತಕ್ಕೆ ಪೂರ್ವಾಭಾವಿಯಾಗಿ ದೇವಸ್ಥಾನದ ಒಳಗಿನ ಗೋಪುರದಲ್ಲಿ ಎಲ್ಲ ಆರು ಮೇಳಗಳ ಪ್ರಧಾನ ಭಾಗವತರು, ಹಿಮ್ಮೇಳ ಸಹಿತ ಭಾಗವತಿಕೆಯ ಮೂಲಕ ತಾಳಮದ್ದಳೆ ನಡೆಯಿತು.

ನಂತರ ರಥಬೀದಿಯಲ್ಲಿ ಆರು ಮೇಳಗಳ ದೇವರಿಗ ಚೌಕಿ ಪೂಜೆ ನಡೆದ ಬಳಿಕ ಆರು ಮೇಳಗಳ ಬಯಲಾಟ ನಡೆಯಿತು. ಈ ವರ್ಷದ ತಿರುಗಾಟದಲ್ಲಿ ಆರು ಮೇಳಗಳು ಕಾಲಮಿತಿಯಲ್ಲಿ ಪ್ರದರ್ಶನಗೊಳ್ಳಲಿದೆ.