ಬೆಳಗಾವಿ : ವಿದ್ಯಾರ್ಥಿಗಳು ವಿದ್ಯಾರ್ಥಿ ದಿಸೆಯಲ್ಲಿಯೇ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾಗರ ಪಾಟೀಲ ಸಲಹೆ ನೀಡಿದರು.

ಕೆಎಲ್ ಇ ಸಂಸ್ಥೆಯ ಜಿಎ ಪದವಿ ಪೂರ್ವ ಕಾಲೇಜಿನ ವತಿಯಿಂದ ಜಾಫರವಾಡಿಯಲ್ಲಿ ನಡೆದ 2024-25 ನೇ ಸಾಲಿನ ಎನ್, ಎಸ್ ಎಸ್ ಘಟಕದ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯ ಆರ್.ಎಸ್. ಪಾಟೀಲ ಮಾತನಾಡಿ, ಗಾಂಧೀಜಿಯವರ ಸರ್ವೋದಯ ರಾಮರಾಜ್ಯದ ಕನಸು ನನಸಾಗುವಂತೆ ನಾವೆಲ್ಲರೂ ಕಾರ್ಯತತ್ಪರತೆಯಿಂದ ಕೆಲಸ ಮಾಡಬೇಕೆಂದರು.

ಗ್ರಾಪಂ ಸದಸ್ಯ ಗೌಡಪ್ಪ ಪಾಟೀಲ, ಎಸ್ ಡಿಎಂ ಸಿ ಕಾರ್ಯಾಧ್ಯಕ್ಷ ತಾನಾಜಿ ಪೀರಾಜಿ ಪಾಟೀಲ, ಮರಾಠಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಪಿ.ಬಿ. ಹಾಲೆನ್ನವರ, ಕಾರ್ಯಕ್ರಮಾಧಿಕಾರಿ ಟಿ.ಪಿ. ಬಾನಕರೆ, ಉಪಕಾರ್ಯಕ್ರಮಾಧಿಕಾರಿ ಡಿ. ಎಸ್. ಪವಾರ, ಎಸ್. ಆರ್. ಗುಮ್ಮಗೋಳ,ಉಪನ್ಯಾಸಕ ವಿನಾಯಕ ನೀರಲಕಟ್ಟಿ, ಎನ್ ಎಸ್ ಎಸ್ ಸ್ವಯಂಸೇವಕರು ಭಾಗವಹಿಸಿದ್ದರು.