ಹೆಬ್ರಿ : ಹೆಬ್ರಿಯ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ವಸತಿ ನಿಲಯದಲ್ಲಿ ಕಾರ್ತಿಕ ಮಾಸದ ಅಮೃತ ದೀಪೋತ್ಸವ ಕಾರ್ಯಕ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅಮೃತ ಭಾರತಿ ಟ್ರಸ್ಟ್ ಅಧ್ಯಕ್ಷ ಸಿಎ ಎಂ ರವಿ ರಾವ್ ಅವರು ದೀಪ ಬೆಳಗಿ ಅಮೃತ ದೀಪೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಈ ಒಂದು ಕಾರ್ತಿಕ ದೀಪೋತ್ಸವ ಬೆಳಕಿನ ಹಬ್ಬವಾಗಿದೆ . ಈ ಹಬ್ಬವನ್ನ ಕಾರ್ತಿಕ ಮಾಸದ ಮೊದಲ ಹುಣ್ಣಿಮೆಯ ದಿನದಂದು ಕೃತ್ತಿಕಾ ನಕ್ಷತ್ರದ ಜೊತೆಯಲ್ಲಿ ಆಚರಿಸಲಾಗುತ್ತದೆ. ಹಿಂದೂ ದೇವಾಲಯಗಳಲ್ಲಿ ಕಾರ್ತಿಕ ದೀಪೋತ್ಸವ ಆಚರಣೆ ಶ್ರದ್ಧೆ ಭಕ್ತಿ ಮತ್ತು ಸಂಭ್ರಮದಿಂದ ನಡೆಯುತ್ತದೆ. ಅಂತೆಯೇ ಇಂದು ನಮ್ಮ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗಾಗಿ ದೀಪೋತ್ಸವದ ಸಂಭ್ರಮವನ್ನು ಸೃಷ್ಟಿಸಲಾಗಿದೆ ಎಂದರು. ವಿದ್ಯಾರ್ಥಿಗಳು ಸುಮಾರು 2000 ದೀಪಗಳನ್ನು ಬೆಳಗಿದರು . ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಸತೀಶ್ ಪೈಯವರು ಗಾಳಿಪಟ ಉತ್ಸವವನ್ನು ಉದ್ಘಾಟಿಸಿದರು. ಗೂಡು ದೀಪಗಳನ್ನು ಬೆಳಗಿಸಲಾಯಿತು. ನಂತರ ಸಿಡಿಮದ್ದು ಪ್ರದರ್ಶನ ನಡೆಯಿತು. ವಿದ್ಯಾರ್ಥಿಗಳಿಗಾಗಿ ವಿಶೇಷ ಬೆಳದಿಂಗಳ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯಕ್ , ಹಾಸ್ಟೆಲ್ ಕಮಿಟಿಯ ಗೌರವಾಧ್ಯಕ್ಷ ಯೋಗೀಶ್ ಭಟ್ , ಟ್ರಸ್ಟಿಗಳಾದ ಸುಧೀರ್ ನಾಯಕ್ , ಗಣೇಶ್ ಕಿಣಿ, ವಿಷ್ಣುಮೂರ್ತಿ ನಾಯಕ್, ಹಾಸ್ಟೆಲ್ ಕಮಿಟಿ ಸದಸ್ಯರಾದ ರಾಮಕೃಷ್ಣ ಆಚಾರ್ಯ, ವಿದ್ಯಾಲಯದ ಮುಖ್ಯೋಪಾಧ್ಯಾಯಿನಿ ಶಕುಂತಲಾ, ಚೀಪ್ ವಾರ್ಡನ್ ರವೀಂದ್ರ , ಕ್ಯಾಂಪಸ್ ಮೇಲ್ವಿಚಾರಕ ರಾಘವೇಂದ್ರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು, ನಿಲಯ ಪಾಲಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.