ಮಡಾಮಕ್ಕಿ: ಶ್ರೀ ವೀರಭದ್ರ ಸ್ವಾಮಿ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮಡಾಮಕ್ಕಿ ಇದರ 35 ನೇ ವರ್ಷದ ತಿರುಗಾಟ ಇಂದಿನಿಂದ ಆರಂಭವಾಗಲಿದೆ. ಇಂದು ರಾತ್ರಿ ಪ್ರಥಮ ದೇವರ ಸೇವೆ ಆಟದೊಂದಿಗೆ 2024-25 ನೇ ಸಾಲಿನ ತಿರುಗಾಟ ಆರಂಭವಾಗಲಿದೆ. ಪ್ರಥಮ ದೇವರ ಸೇವೆ ಆಟ ಶಶಿಪ್ರಭ- ಶ್ರೀನಿವಾಸ ಕಲ್ಯಾಣದೊಂದಿಗೆ ಪ್ರಾರಂಭವಾಗುತ್ತಿದ್ದು ಗಣಹೋಮ ಹಾಗೂ ರಾತ್ರಿ ಮಹಾಗಣಪತಿ ಪೂಜೆ ನೆರವೇರುತ್ತಿದೆ.