2023 ರ ಚಳಿಗಾಲದ ಅಧಿವೇಶನ; ಗಣ್ಯ-ಮಾನ್ಯರ ವಸತಿಗಾಗಿ :682 ಲಕ್ಷ- ಊಟ ಉಪಹಾರಕ್ಕಾಗಿ: 235 ಲಕ್ಷ ಪೋಲಿಸ್ ಇಲಾಖೆ ವೆಚ್ಚ: 732 ಲಕ್ಷ- ಲೋಕೋಪಯೋಗಿ ಇಲಾಖೆ : 571ಲಕ್ಷ ಅಧಿವೇಶನ ವೆಚ್ಚ : ಒಂದು ಗಂಟೆಗೆ 20 ಲಕ್ಷ ಪೋಲಾಗುತ್ತಿದೆ ಸಾರ್ವಜನಿಕರ ತೆರಿಗೆ ಹಣ ಅಭಿವೃದ್ಧಿಯ ಚರ್ಚೆಗಳು ಮಾತ್ರ ಶೂನ್ಯ

 

ಬೆಳಗಾವಿ : ಕಳೆದ ವರ್ಷ ದಿ: ೦೪/೧೨/೨೦೨೩ ರಿಂದ ೧೫/೧೨/೨೦೨೩ರ ವರೆಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆದಿದ್ದ ಚಳಿಗಾಲದ ಅಧಿವೇಶನದ ಸಲುವಾಗಿ ಈಗ ಲಭ್ಯವಿರುವ ದಾಖಲೆಗಳ ಪ್ರಕಾರ ಸರಕಾರದ ಖಜಾನೆಯಿಂದ ಬರೋಬ್ಬರಿ ೨೪,೮೯,೦೪,೮೦೫=೦೦ (೨೪ ಕೋಟಿ ೮೯ ಲಕ್ಷ ೦೪ ಸಾವಿರದ ೮೦೫ ರೂ.ಗಳು) ವೆಚ್ಚವಾಗಿರುವ ಅಂಶವು ಮಾಹಿತಿ ಹಕ್ಕಿನಿಂದ ಬೆಳಕಿಗೆ ಬಂದಿದೆ ಎಂದು ಮೂಡಲಗಿಯ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ.

ಸುವರ್ಣ ಸೌಧದಲ್ಲಿ ಒಟ್ಟು ೧೦ ದಿವಸಗಳ ಕಾಲ ನಡೆದಿದ್ದ ಕಳೆದ ಚಳಿಗಾಲದ ಅಧಿವೇಶನದ ಸಮಯದಲ್ಲಿ ವಿಧಾನ ಸಭೆಯ ಕಾರ್ಯ ಕಲಾಪಗಳು ನಡೆದಿರುವ ಅವಧಿಯು ೬೬ ಗಂಟೆ ೧೧ ನಿಮಿಷಗಳು, ಅದರಂತೆ ವಿಧಾನ ಪರಿಷತ್ತಿನ ಕಾರ್ಯ ಕಲಾಪಗಳು ನಡೆದಿರುವ ಅವಧಿಯು ೫೭ ಗಂಟೆ ೨೯ ನಿಮಿಷಗಳು ಒಟ್ಟು ಕಲಾಪದ ಅವಧಿ ೧೨೪ ಗಂಟೆಗಳು ಎಂದು ಸಚಿವಾಲಯದ ಅಧಿಕಾರಿಗಳು ನೀಡಿರುವ ಮಾಹಿತಿಯಿಂದ ತಿಳಿದು ಬಂದಿರುವದು.

ಅಧಿವೇಶನಕ್ಕಾಗಿ ವೆಚ್ಚ ಮಾಡಲಾದ ಒಟ್ಟು ಹಣಕ್ಕೆ ಲೆಕ್ಕ ಹಾಕಿ ನೋಡಿದಾಗ ಸುವರ್ಣ ಸೌಧದಲ್ಲಿ ನಡೆದಿದ್ದ ೨೦೨೩ರ ಅಧಿವೇಶನದ ಸಲುವಾಗಿ ಪ್ರತಿ ೦೧ ಗಂಟೆಗೆ ಸರಾಸರಿ ೨೦ ಲಕ್ಷ ೦೮ ಸಾವಿರ ರೂ.ಗಳು ವೆಚ್ಚವಾಗುತ್ತಿರುವದು ಎಂದು ಕಂಡು ಬರುತ್ತಿದೆ. (ಇನ್ನೂ ಸುಮಾರು ೧.೫ ಕೋಟಿ ರೂ.ಗಳ ಮಾಹಿತಿ ಲಭ್ಯವಿರುವುದಿಲ್ಲ). ಅಧಿವೇಶನದ ಕಾರ್ಯ ಕಲಾಪಗಳಿಗೆ ಹಾಜರಾಗುವ ಸದಸ್ಯರುಗಳಿಗೆ ಅವರ ಕ್ಷೇತ್ರದಿಂದ ಅಧಿವೇಶನ ನಡೆಯುವ ಸ್ಥಳಕ್ಕೆ ಹೋಗಿ ಬರಲು ಪ್ರತಿ ಕಿ.ಮೀ ಗೆ ೩೫ ರೂ.ಗಳಂತೆ ಪ್ರಯಾಣ ಭತ್ಯೆಯನ್ನು ಹಾಗೂ ಅಧಿವೇಶನ ಪ್ರಾರಂಭಕ್ಕೆ ೦೨ ದಿವಸಗಳ ಮೊದಲು ಅಧಿವೇಶನ ನಂತರದ ೦೨ ದಿವಸಗಳಿಗೆ ಪ್ರತಿ ದಿನವೊಂದಕ್ಕೆ ೨೫೦೦ ರೂ.ಗಳನ್ನು ದಿನಭತ್ಯೆಯಾಗಿ ಪಾವತಿಸಲಾಗುತ್ತಿದೆ. (ಗಮನಿಸಬೇಕಾದ ಅಂಶವೆಂದರೆ ಬೆಳಗಾವಿ ನಗರದಿಂದ ಸುವರ್ಣ ಸೌಧಕ್ಕೆ ಹೋಗಿ ಬರಲು ಸದಸ್ಯರುಗಳಿಗೆ ದಿನವೊಂದಕ್ಕೆ ೨೫೦೦ ರೂ.ಗಳ ಸಾರಿಗೆ ಭತ್ಯೆ ಸಹ ನೀಡಲಾಗುತ್ತಿದೆ)

ಇಷ್ಟೆಲ್ಲಾ ಸವಲತ್ತುಗಳನ್ನು ನೀಡುತ್ತಿದ್ದರೂ ಕೂಡಾ ಕಳೆದ ವಿಧಾನಸಭೆಯ ಕಲಾಪಗಳಲ್ಲಿ ಕೇವಲ ೫೩ ಜನ ಶಾಸಕರು & ವಿಧಾನ ಪರಿಷತ್ತಿನ ಕಲಾಪಗಳಲ್ಲಿ ಕೇವಲ ೩೩ ಜನ ಶಾಸಕರುಗಳು ಮಾತ್ರ ಅಧಿವೇಶನದಲ್ಲಿ ಪೂರ್ಣಾವಧಿಗೆ ಭಾಗವಹಿಸಿರುವದು ಇಡೀ ಅಧಿವೇಶನಕ್ಕೆ ಕಪ್ಪು ಚುಕ್ಕೆ ಎಂದರೆ ತಪ್ಪಾಗಲಾರದು, ಇನ್ನೂ ಮೇಲಾದರೂ ನಮ್ಮ ಜನಪ್ರತಿನಿಧಿಗಳು ಇದನ್ನು ತಿಳಿದುಕೊಂಡರೆ ಒಳ್ಳೆಯದು.

ಲಭ್ಯವಿರುವ ಮಾಹಿತಿಗಳ ಪ್ರಕಾರ ಕಳೆದ ಚಳಿಗಾಲದ ಅಧಿವೇಶನದ
ಸಲುವಾಗಿ ವೆಚ್ಚ ಮಾಡಲಾದ ಹಣದ ಕೆಲವು ಪ್ರಮುಖ

ಅಂಶಗಳು ಈ ಕೆಳಗಿನಂತಿರುತ್ತವೆ.

 ಅಧಿವೇಶನದಲ್ಲಿ ಭಾಗವಹಿಸಲು ವಿಧಾನ ಸಭೆಯಿಂದ ೧೫,೮೬,೫೦೦

ನಿಯೋಜಿಸಲಾಗಿದ್ದ ೨೩೯ ಜನ ಅಧಿಕಾರಿ/ ಸಿಬ್ಬಂದಿಗಳ ರಾತ್ರಿ
ಊಟದ ಸಲುವಾಗಿ ಪಾವತಿಸಲಾದ ಒಟ್ಟು ಹಣದ ವಿವರ. (ತಲಾ ೫೦೦ ರೂ.ಗಳಂತೆ)

 ವಿಧಾನಸಭೆಯ ಸಚಿವಾಲಯದ ೭೦೧ ಜನ ಅಧಿಕಾರಿ/ ಸಿಬ್ಬಂದಿಗಳಿಗೆ ೮೨,೯೪,೦೦೦ ನೀಡಲಾದ ಅಧಿವೇಶನದ ಭತ್ಯೆಯ ಒಟ್ಟು ಹಣದ ವಿವರ.

 ಅಧಿವೇಶನದಲ್ಲಿ ಭಾಗವಹಿಸಿದ್ದ ೬೩ ಜನ ವಿಧಾನ ಪರಿಷತ್ತ ಸದಸ್ಯರು ೩೮,೧೦,೬೪೦ ಗಳಿಗೆ ಪ್ರಯಾಣ ಭತ್ಯೆ ದಿನ ಭತ್ಯೆಗಳ ಸಲುವಾಗಿ ಪಾವತಿಸಿದ ಹಣ.

 ಅಧಿವೇಶನದಲ್ಲಿ ಭಾಗವಹಿಸಿದ್ದ ಗಣ್ಯ ಮಾನ್ಯರು, ಮಾರ್ಷಲ್‌ಗಳು, ೨,೩೫,೯೪,೨೩೮
ಹಿರಿಯ ಅಧಿಕಾರಿಗಳು/ ಸ್ಥಳೀಯ ಅಧಿಕಾರಿ/ ಸಿಬ್ಬಂದಿಗಳ ಊಟ-ಉಪಹಾರ ಚಹಾ/ಕಾಫಿ ಹಾಗೂ ಸ್ನ್ಯಾಕ್ಸ್ ಅಲ್ಲದೇ ಪ್ರೂಟ್ ಸಲಾಡ್
ಪೂರೈಸಿದ ವಿವಿಧ ಹೊಟೇಲುಗಳಿಗೆ ಪಾವತಿಸಿದ ಹಣದ ವಿವರ.

 ಅಧಿವೇಶನದಲ್ಲಿ ಭಾಗವಹಿಸಿದ್ದ ಗಣ್ಯರು, ಸಚಿವರುಗಳು/ ಶಾಸಕರುಗಳು, ೬,೮೨,೦೮,೦೫೭
ಅಧಿಕಾರಿಗಳ ವಾಸ್ತವ್ಯದ ಸಲುವಾಗಿ ನಗರದ ೮೬ ಹೊಟೇಲುಗಳಲ್ಲಿ
ಕಾಯ್ದಿರಿಸಿದ ಕೊಠಡಿಗಳ ಬಾಡಿಗೆ ಸಲುವಾಗಿ ಪಾವತಿಸಿದ ಹಣದ ವಿವರ.

 ಗಣ್ಯ ಮಾನ್ಯರು, ಸಚಿವರು/ ಶಾಸಕರು, ಅಧಿಕಾರಿ-ಸಿಬ್ಬಂದಿಗಳ ಸಲುವಾಗಿ ೪೦,೩೦,೮೧೩
೬೦ ಡಿ.ವಿ ವಾಹನ ೪೩೨ ಇತರ, ೧೧೭ ಸಚಿವಾಲಯಗಳ ವಾಹನಗಳ ಇಂಧನದ ಸಲುವಾಗಿ ಪಾವತಿಸಿದ ಹಣದ ವಿವರ.

 ಅಧಿವೇಶನದಲ್ಲಿ ಕರ್ತವ್ಯ ನಿರ್ವಹಿಸಲು ವಿವಿಧ ಜಿಲ್ಲೆಗಳಿಂದ ಪೋಲಿಸ್, ೮೯,೭೭,೯೪೦
ಸಿಬ್ಬಂದಿಗಳನ್ನು ಕರೆತರುವ ಸಲುವಾಗಿ ೭೭ ಸಾರಿಗೆಗಳ ಬಾಡಿಗೆಯ
ಸಲುವಾಗಿ ಕೆ.ಎಸ್.ಆರ್.ಟಿ.ಸಿ ಗೆ ಪಾವತಿಸಿದ ಹಣದ ವಿವರ.

ಪೋಲಿಸ್ ಇಲಾಖೆಯ ವೆಚ್ಚದ ವಿವರ
(೭,೩೨,೮೩,೩೬೦=೦೦)

 ಅಧಿವೇಶನದ ಬಂದೋಬಸ್ತ್ ಸಲುವಾಗಿ ನಿಯೋಜಿಸಲಾಗಿದ್ದ ಸುಮಾರು ೩,೩೭,೩೫,೦೦೦
೬,೫೦೦ ಪೋಲಿಸ್ ಸಿಬ್ಬಂದಿ/ ಅಧಿಕಾರಿಗಳ ಊಟ-ಉಪಹಾರಗಳ
ಸಲುವಾಗಿ ವಿವಿಧ ಕೇಟರಿಂಗ್ ಏಜೆನ್ಸಿಗಳಿಗೆ ಪಾವತಿಸಿದ ಹಣದ ವಿವರ.

 ಪೋಲಿಸ್ ಅಧಿಕಾರಿ/ ಸಿಬ್ಬಂದಿಗಳಿಗೆ ೧೦೦ ತಾತ್ಕಾಲಿಕ ಶೌಚಾಲಯಗಳ ೩೬,೦೦,೦೦೦
ಸಲುವಾಗಿ ಮೆ|| ಅಭಿನವ ಪಾಲಿಮಾರ್ ಬೆಳಗಾವಿ ಇವರಿಗೆ ಪಾವತಿಸಿದ ಹಣದ ವಿವರ.

 ಕಾನೂನಿನ ಸುವವ್ಯಸ್ಥೆ ಕಾಪಾಡಲು ಸಿ.ಸಿ.ಟಿ.ವಿ/ ಕ್ಯಾಮರಾಗಳು ಮತ್ತು ೬೯,೪೮,೫೦೩
ಇತರ ಪರಿಕರಗಳ ಸಲುವಾಗಿ ಮೆ|| ವಿಜಿಲ್ ಸೇಪ್ಟ್ ಟೆಕ್ನಾಲಾಜಿ
ಬೆಳಗಾವಿ, ಇವರಿಗೆ ಪಾವತಿಸಿದ ಹಣದ ವಿವರ.

 ಪೋಲಿಸ್ ಅಧಿಕಾರಿ/ ಸಿಬ್ಬಂದಿಗಳ ವಸತಿ ವ್ಯವಸ್ಥೆಯ ಸಲುವಾಗಿ ೨,೮೯,೯೯,೮೫೭
ವೆಚ್ಚ ಮಾಡಲಾದ ಹಣದ ವಿವರ.

ಲೋಕೋಪಯೋಗಿ ಇಲಾಖೆ ವೆಚ್ಚದ ವಿವರ
(೫,೭೧,೧೯,೨೫೭=೦೦)
 ಸುವರ್ಣ ಸೌಧದ ಒಳಗಡೆ ಹಾಗೂ ಹೊರಗಡೆ ಕೈಗೊಳ್ಳಲಾದ ೧,೫೫,೮೬,೭೮೩
ಸಿವಿಲ್ ಕಾಮಗಾರಿ, ಸುಣ್ಣ-ಬಣ್ಣ, ಪಾಚಿ ತೊಳೆಯುವುದು,
ಕುಡಿಯುವ ನೀರು ಪೂರೈಕೆ ಸಲುವಾಗಿ ವೆಚ್ಚವಾದ ಹಣ.
 ಪೆಂಡಾಲ್, ಬ್ಯಾರಿಕೇಡಿಂಗ್, ಆಸನಗಳ ಸಲುವಾಗಿ ವಿವಿಧ ಏಜೆನ್ಸಿ ೨,೨೯,೮೨,೦೫೪
ಗಳಿಗೆ ಹಾಗೂ ಇನ್ನುಳಿದ ತುರ್ತು ಕಾಮಗಾರಿಗಳ ಸಲುವಾಗಿ
ವೆಚ್ಚ ಮಾಡಿದ ಹಣದ ವಿವರ.

 ಸುವರ್ಣ ಸೌಧದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಛೇರಿಗಳಿಗೆ ೧,೬೬,೨೧,೧೩೩
ಗಣಕಯಂತ್ರಗಳು, ಅಂತರ್ಜಾಲ ಪರಿಕರಗಳು, ಜೆರಾಕ್ಸ್ ಹಾಗೂ
ಮುದ್ರಣ ಯಂತ್ರಗಳು, ಸ್ಟೇಷನರಿ ವಸ್ತುಗಳು ಸಲುವಾಗಿ ವಿವಿಧ
ಏಜೆನ್ಸಿಗಳಿಗೆ ಮತ್ತು ವಿದ್ಯುತ್ ವ್ಯವಸ್ಥೆಯ ಸಲುವಾಗಿ ಹೆಸ್ಕಾಂಗೆ ಪಾವತಿಸಿದ ಹಣ.

 ಕರ್ನಾಟಕ ಎಂದು ನಾಮಕರಣ ಮಾಡಿ ೫೦ ವರ್ಷಗಳು ತುಂಬಿದ ೧೯,೨೯,೨೮೭
ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಕ್ರಮಗಳ ಸಲುವಾಗಿ
ಆಳ್ವಾಸ ನುಡಿಸಿರಿ, ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹಾಗೂ
ಗಣ್ಯರ/ ಅತಿಥಿಗಳ ಉಡುಗೊರೆ ಸಲುವಾಗಿ ವೆಚ್ಚವಾದ ಹಣದ ವಿವರ.

ಕೆಲವು ಪ್ರಮುಖ ಹೋಟೆಲುಗಳಿಗೆ ಪಾವತಿಸಿದ
ಕೊಠಡಿಗಳ ಬಾಡಿಗೆ ಹಣದ ವಿವರ
 ಹೊಟೇಲ್ ಯು.ಕೆ ೨೭ ಬೆಳಗಾವಿ ೭೨,೩೩,೪೮೨
 ಹೊಟೇಲ್ ಪೇರ್ ಫೀಲ್ಡ್ ಮ್ಯಾರಿಟ್ ೭೨,೧೨,೬೬೦
 ಹೊಟೇಲ್ ಸಂಕಮ ತಾಯಿ ೩೯,೯೮,೪೪೦
 ಹೊಟೇಲ್ ಈಫಾ ೨೬,೭೬,೪೮೦
 ಹೊಟೇಲ್ ರಾಮದೇವ ೨೪,೩೫,೨೨೧
 ಹೊಟೇಲ್ ನೇಟಿವ್ಹ್ ೨೩,೦೮,೭೪೦
 ಹೊಟೇಲ್ ಸನ್ಮಾನ ಡಿಲಕ್ಸ್ ೨೧,೧೦,೮೨೪
 ಹೊಟೇಲ್ ಆದರ್ಶ ಪ್ಯಾಲೇಸ್ ೧೯,೭೫,೩೬೦

ಊಟ-ಉಪಹಾರ ಪೂರೈಸಿದ ಕೆಲವು ಪ್ರಮುಖ
ಹೊಟೇಲ್‌ಗಳಿಗೆ ಪಾವತಿಸಿದ ಹಣದ ವಿವರ
 ಅಧಿವೇಶನದ ಸಮಯದಲ್ಲಿ ಮಧ್ಯಾಹ್ನ ಊಟ ಹಾಗೂ ೯೨,೩೯,೮೭೫
ಉಪಹಾರ, ಸ್ನ್ಯಾಕ್ಸ್ ಸರಬರಾಜು ಮಾಡಿದ್ದಕ್ಕಾಗಿ ಹೊಟೇಲ್
ಸಂಕಮ ತಾಯಿ ಇವರಿಗೆ ಪಾವತಿಸಲಾದ ಹಣದ ವಿವರ.

 ಸರ್ಕೀಟ್ ಹೌಸ್, ಏರ್ ಪೋರ್ಟ, ಕೋರ್ಟಯಾರ್ಡ ಗಳಲ್ಲಿಯ ೪೫,೦೧,೩೩೫
ಗಣ್ಯ-ಮಾನ್ಯರುಗಳಿಗೆ ಊಟ-ಉಪಹಾರ, ಸ್ನ್ಯಾಕ್ಸ್ ಗಳ ಸಲುವಾಗಿ
ಹೋಟೆಲ್ ಸ್ಪೆöÊಸ್ ಗಾರ್ಡನ್ ಗೋಕಾಕ, ಇವರಿಗೆ
ಪಾವತಿಸಿಲಾದ ಹಣದ ವಿವರ.

 ಗಣ್ಯ-ಮಾನ್ಯರು ಹಾಗೂ ಸಿಬ್ಬಂದಿಗಳಿಗೆ ಊಟ-ಉಪಹಾರದ ೨೧,೬೭,೮೮೬
ಸಲುವಾಗಿ ಸಂಗಮೇಶ ಕೇರ್ಸ್ ಬೆಳಗಾವಿ, ಇವರಿಗೆ ಪಾವತಿಸಿದ
ಹಣದ ವಿವರ.

 ಊಟ-ಉಪಹಾರಗಳ ಸಲುವಾಗಿ ಈರಪ್ಪ ಪಾಟೋಳಿ ಇವರಿಗೆ ೧೦,೨೬,೦೩೦
ಪಾವತಿಸಿದ ಹಣದ ವಿವರ.

 ವಿ.ಟಿ.ಯು ದಲ್ಲಿದ್ದ ಗಣ್ಯ-ಮಾನ್ಯರುಗಳ ಊಟ-ಉಪಹಾರದ ೨೧,೨೫,೩೦೩
ಸಲುವಾಗಿ ಹೋಟೆಲ್ ಮಿಲನ್, ಇವರಿಗೆ ಪಾವತಿಸಿದ ಹಣ.

 ಕ್ರೀಡಾ ಶಾಲೆಯಲ್ಲಿದ್ದವರಿಗೆ ಊಟ-ಉಪಹಾರದ ಸಲುವಾಗಿ ೮,೫೧,೯೯೬
ವಸಂತ ಕೇರ್ಸ್ ಇವರಿಗೆ ಪಾವತಿಸಿದ ಹಣದ ವಿವರ.

 ಮಾಧ್ಯಮದವರ ಊಟ-ಉಪಹಾರಗಳ ಸಲುವಾಗಿ ಕೀರ್ತಿ ೨೭,೮೬,೦೦೦
ಹೋಟೆಲ್ ಇವರಿಗೆ ಪಾವತಿಸಿದ ಹಣದ ವಿವರ.

 ಅಧಿವೇಶನ ವೀಕ್ಷಿಸಲು ಆಗಮಿಸಿದ ಶಾಲಾ ಮಕ್ಕಳಿಗೆ ಜ್ಯೂಸ್ ೪,೦೧,೭೧೫
ಪೂರೈಸಿದ ಬೆಂಗಳೂರು ಮೂಲದ ಅರೇಬಿಯನ್ ಜ್ಯೂಸ್
ಕಂಪನಿಗೆ ಸಂದಾಯ ಮಾಡಿದ ಹಣದ ವಿವರ. (೨೬,೭೮೧ ಗ್ಲಾಸ್)
 ಬಾಳೆ ಹಣ್ಣು, ಪ್ರೂಟ್ ಸಲಾಡ್ ಸರಬರಾಜು ಮಾಡಿದ ೧,೧೩,೭೦೦
ಹಾಫ ಕಾಮ್ಸ್ ಬೆಳಗಾವಿ, ಇವರಿಗೆ ಪಾವತಿಸಿದ ಹಣದ ವಿವರ.

 ಅಧಿವೇಶನ ಸಮಯದಲ್ಲಿ ಸಲಗರ ಟೀ & ಹಟ್ಟಿ ಕಾಫಿ ೩,೪೦,೦೫೮
ಪೂರೈಸಿದ್ದಕ್ಕಾಗಿ ಇವರಿಗೆ ಪಾವತಿಸಿದ ಹಣದ ವಿವರ.

ಗಮನಿಸಬೇಕಾದ ಅಧಿವೇಶನದ ಪ್ರಮುಖ ಅಂಶಗಳು

 ಪ್ರತಿ ಸಲ ಅಧಿಕಾರಿಗಳು ಮಾತ್ರ ಅಧಿವೇಶನದ ರುಚಿ ಅನುಭವಿಸುತ್ತಿದ್ದರು ಆದರೆ, ೨೦೨೩ರ ಅಧಿವೇಶನ ಕಲಾಪಗಳನ್ನು ವೀಕ್ಷಣೆ ಮಾಡಲು ಬಂದಿದ್ದ ಮಕ್ಕಳಿಗೆ ಜ್ಯೂಸ್ ಕುಡಿಸುವುದರ ಮೂಲಕ ಅಧಿವೇಶನದ ರುಚಿಯನ್ನು ಮಕ್ಕಳಿಗೂ ಕೂಡಾ ತೋರಿಸಿರುವದು ವಿಶೇಷವಾಗಿದೆ.
 ಬೆಳಗಾವಿ ಅಧಿವೇಶನದ ಸಮಯದಲ್ಲಿ ಬೆಂಗಳೂರಿನ ವಿಧಾನ ಸೌಧದಲ್ಲಿರುವವರಿಗೂ ಅಧಿವೇಶನ ಭತ್ಯೆ ನೀಡಲಾಗುತ್ತಿದೆ, ಆದರೆ ಅಧಿವೇಶನಕ್ಕಾಗಿ ಹಗಲಿರುಳು ದುಡಿಯುತ್ತಿರುವ ಬೆಳಗಾವಿ ಜಿಲ್ಲೆಯ ಅಧಿಕಾರಿ-ಸಿಬ್ಬಂದಿಗಳಿಗೆ ಅಧಿವೇಶನ ಭತ್ಯೆ ನೀಡದೇ ಇರುವುದು ವಿಷಾದನೀಯವಾಗಿದೆ. ಉಭಯ ಸದನಗಳ ಮಾನ್ಯ ಪೀಠಾಧ್ಯಕ್ಷರುಗಳು ಈ ತಾರತಮ್ಯ ಹೋಗಲಾಡಿಸುವದು ಅವಶ್ಯವಿದೆ.
 ಊಟ-ಉಪಹಾರಗಳ ಸಲುವಾಗಿಯೇ ದಿನಭತ್ಯೆಗಳನ್ನು ಪಡೆದುಕೊಳ್ಳುತ್ತಿದ್ದರೂ ಕೂಡಾ ಸಾರ್ವಜನಿಕರ ತೆರಿಗೆ ಹಣದಲ್ಲಿ ಆತಿಥ್ಯದ ದೃಷ್ಠಿಯಿಂದ ಜಿಲ್ಲಾಡಳಿತದಿಂದ ತಮಗೆ ನೀಡಲಾಗುತ್ತಿರುವ ಊಟ-ಉಪಹಾರಕ್ಕೆ ಹೋಟೆಲಗಳು ನಿಗದಿ ಮಾಡಿದ ದರ ಎಷ್ಟು? ಎಂಬುದನ್ನಾದರೂ ತಮ್ಮ ಸಿಬ್ಬಂದಿಗಳಿಂದ ತಿಳಿದುಕೊಳ್ಳುವುದರ ಜೊತೆಗೆ ನಮ್ಮ ಜನಪ್ರತಿನಿಧಿಗಳು ಅಧಿವೇಶನದ ಕಲಾಪಗಳಲ್ಲಿ ತಪ್ಪದೇ ಭಾಗವಹಿಸಲು ಚಿಂತನೆ ನಡೆಸುವದು ಅವಶ್ಯವಿದೆ.
 ಪಾರದರ್ಶಕ ಆಡಳಿತದ ದೃಷ್ಠಿಯಿಂದ ಜಿಲ್ಲಾಡಳಿತವು ಸುವರ್ಣ ಸೌಧದಲ್ಲಿ ನಡೆಯುವ ಪ್ರತಿ ಅಧಿವೇಶನದ ನಂತರ ಅದರ ಖರ್ಚು ವೆಚ್ಚಗಳ ಕುರಿತಾಗಿ ಕಿರು ಹೊತ್ತಿಗೆ ಪ್ರಕಟಿಸಿ ಸಾರ್ವಜನಿಕರಿಗೆ ತಿಳಿಯಪಡಿಸುವದು ಅವಶ್ಯವಿದೆ.

ಒಟ್ಟಾರೆ ಸುಮಾರು ೫೦೦ ಕೋಟಿ ರೂ.ಗಳನ್ನು ವೆಚ್ಚ ಮಾಡಿ ನಿರ್ಮಿಸಲಾಗಿರುವ ಸುವರ್ಣ ಸೌಧದಲ್ಲಿ ನಡೆಸಲಾಗುತ್ತಿರುವ ಈ ಅಧಿವೇಶನಗಳಿಂದ ಉತ್ತರ ಕರ್ನಾಟಕ ಭಾಗದ ಅಭಿವೃದ್ಧಿಯ ಬಗ್ಗೆ ಚರ್ಚೆಗಳಾಗಿ ಅಭಿವೃದ್ಧಿಗೆ ನಾಂದಿ ಹಾಡಬಹುದಾಗಿದೆ, ಎಂದು ಆರಂಭದಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದ ಈ ಭಾಗದ ಜನರಿಗೆ ಇದುವರೆಗೂ ನಡೆದ ಅಧೀವೇಶನಗಳೆಲ್ಲವೂ ಇವರ ನಿರೀಕ್ಷೆಗಳನ್ನು ಹುಸಿ ಮಾಡಿಬಿಟ್ಟಿವೆ. ಆದರೆ ಅಧಿವೇಶನದ ಹೆಸರಲ್ಲಿ ಸಾರ್ವಜನಿಕರ ತೆರಿಗೆ ಹಣ ಪೋಲು ಮಾಡುತ್ತಿರುವ ಅಧಿಕಾರಿಗಳು ಮಾತ್ರ ಅಭಿವೃದ್ಧಿ ಹೊಂದಿದರೆ ವಿನಃ ಉತ್ತರ ಕರ್ನಾಟಕ ಅಭಿವೃದ್ಧಿಯಾಗಲಿಲ್ಲ ಎಂಬುವುದು ಜನರ ನೋವಿನ ಅನಿಸಿಕೆಯಾಗಿದೆ ಎಂದರೆ ತಪ್ಪಾಗಲಾರದು ಎಂದು ಭೀಮಪ್ಪ ಗಡಾದ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.