ಮಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬಜಪೆ ಯೋಜನಾ ಕಚೇರಿ ವ್ಯಾಪ್ತಿಯ ಕಾವೂರು ವಲಯದ ಮಳವೂರ್ ಕಾರ್ಯಕ್ಷೇತ್ರದ ಕೆಂಜಾರಿನಲ್ಲಿರುವ ಕಪಿಲ ಗೋಶಾಲೆ ನಿರ್ವಹಣೆಗಾಗಿ ಶ್ರೀ ಕ್ಷೇತ್ರದಿಂದ 2 ಲಕ್ಷ ರೂ. ಮೊತ್ತ ಮಂಜೂರು ಆಗಿದೆ. ಈ ಬಗ್ಗೆ ಮಂಜೂರಾತಿ ಪತ್ರವನ್ನು ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ವಿತರಿಸಿದರು. ಕಪಿಲ ಗೋಶಾಲೆಯನ್ನು ನಿರ್ವಹಣೆ ಮಾಡುತ್ತಿರುವ ಪ್ರಕಾಶ್ ಶೆಟ್ಟಿ ಮಂಜೂರಾತಿ ಪತ್ರ ಸ್ವೀಕರಿಸಿ ಶ್ರೀ ಕ್ಷೇತ್ರದ ಸೇವೆಯನ್ನು ಸ್ಮರಿಸಿ ಸಂತಸ ವ್ಯಕ್ತಪಡಿಸಿದರು.

ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಗಿರೀಶ್, ವಲಯ ಮೇಲ್ವಿಚಾರಕ ಅಭಿಮಾನ್. ಎಂ. ಜೈನ್ ಹಾಗೂ ಬಜಪೆ ಕೇಂದ್ರ ಒಕ್ಕೂಟ ಅಧ್ಯಕ್ಷ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.