ಬೆಳಗಾವಿ : ಡಿಸೆಂಬರ್ 6 ರಂದು ವಿಶ್ವೇಶ್ವರಯ್ಯ ಟ್ರೇಡ್ ಪ್ರಮೋಷನ್ ಸೆಂಟರ್ (VTPC) ಸಹಯೋಗದೊಂದಿಗೆ KLE ಸೊಸೈಟಿಯ B.V. ಬೆಲ್ಲದ ಕಾನೂನು ಕಾಲೇಜು ವತಿಯಿಂದ ಒಂದು ದಿನದ ಬೌದ್ಧಿಕ ಆಸ್ತಿಯ ರಕ್ಷಣೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

M/s ಮಾಸ್ಟರ್ ಲೆಗೊ-ಕ್ರ್ಯಾಟ್ಸ್ ಕನ್ಸಲ್ಟೆನ್ಸಿ ಲಿಖಿತಾ ಪಿ. ಮಹ್ಡಿಕರ್, ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ಸಲಹೆಗಾರ್ತಿ ಡಾ. ನಂದಿನಿ ಧೋಲೆಪತ್ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ಅಮರ ಅಶೋಕ ಜನಗೌಡ ಅವರು ಮಾನವೀಯ ವಿಚಾರಗಳ ಮಹತ್ವವನ್ನು ತಿಳಿಸಿ, ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು ಎಂದು ಹೇಳಿದರು.

ಪ್ರಾಚಾರ್ಯೆ ಡಾ.ಜ್ಯೋತಿ ಜಿ.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಡಾ.ಅಶ್ವಿನಿ ಬಿ.ಹಿರೇಮಠ ಸ್ವಾಗತಿಸಿ, ಪರಿಚಯಿಸಿದರು. ಡಾ.ಸುಪ್ರಿಯಾ ಸ್ವಾಮಿ ವಂದಿಸಿದರು. ಪ್ರೇರಣಾ ಹನುಮಸೇಟ್ ನಿರೂಪಿಸಿದರು.