ಬೆಳಗಾವಿ :
ಬೆಳಗಾವಿ ನಗರದ ಸೆಂಟ್ ಜೋಸೆಫ್ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿ ಅನ್ವಿತಾ ರವೀಂದ್ರ ಗೋಕಾಕ ಎರಡು ನಿಮಿಷಗಳಲ್ಲಿ ಪಿರಿಯಾಡಿಕ್ ಟೇಬಲ್ ಅನ್ನು ಕಂಠಪಾಠ ಮಾಡಿ ಸರಾಗವಾಗಿ ಹೇಳುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್
-2023 ರಲ್ಲಿ ದಾಖಲೆ ಮಾಡಿದ್ದಾಳೆ.
ವಿದ್ಯಾರ್ಥಿನಿಗೆ ಶಾಲೆಯ ಪ್ರಾಚಾರ್ಯರು ,ಶಿಕ್ಷಕರು, ವಿದ್ಯಾರ್ಥಿಯ ಪೋಷಕರಾದ ರವೀಂದ್ರ ಗೋಕಾಕ ,ನಮಿತಾ ಕೋಲಕಾರ ಸಮಸ್ತ ಗೋಕಾಕ ಕುಟುಂಬ ಮತ್ತು ಕೋಲಕಾರ ಕುಟುಂಬದವರು ಅಭಿನಂದಿಸಿದ್ದಾರೆ.