ಮಂಗಳೂರು : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದರ ‘ಜ್ಞಾನ ದೀಪ’ ಕಾರ್ಯಕ್ರಮದ ಅಡಿಯಲ್ಲಿ ದ.ಕ.ಜಿ.ಪಂ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮರಕಡ,ಕುಂಜತ್ತಬೈಲ್ ಇಲ್ಲಿಗೆ ಹತ್ತು ಡೆಸ್ಕ್ ಮತ್ತು ಬೆಂಚ್ ಕೊಡುಗೆಯಾಗಿ ನೀಡಿದ್ದು ಇದರ ಹಸ್ತಾಂತರ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಸುರೇಶ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

 


ಮ.ನ.ಪಾ ಸದಸ್ಯ ಶರತ್ ಕುಮಾರ್ ಸಂಘದ ಸಾಮಾಜಿಕ ‌ಕಾರ್ಯಗಳನ್ನು‌ ಶ್ಲಾಘಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾವೂರು ವಲಯದ ಮೇಲ್ವಿಚಾರಕ ಅಭಿಮಾನ್ ಜೈನ್,ಕೇಂದ್ರ ಒಕ್ಕೂಟದ ಅಧ್ಯಕ್ಷ ರಾಜೇಶ್ ಶೆಟ್ಟಿ, ಸೇವಾ ಪ್ರತಿನಿಧಿ ಸುನೀತಾ, ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾರಾಯಣ ಸಾಲಿಯಾನ್,ಕಾರ್ಯದರ್ಶಿ ರೆಹಮಾನ್ ಖಾನ್ ಕುಂಜತ್ತಬೈಲ್ , ಸಂಘದ ಪಧಾದಿಕಾರಿಗಳಾದ ಕೌಸರ್ ಬಾನು, ಸುಮತಿ,ಲತಾ,ಶಾಲಾ ಮೇಲುಸ್ತುವಾರಿ ಸಮಿತಿಯ ಸದಸ್ಯರು, ಶಿಕ್ಷಕರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ನೇತ್ರಾವತಿ ಸ್ವಾಗತಿಸಿದರು, ಸಹ ಶಿಕ್ಷಕಿ ನಾಗಮಣಿ ನಿರೂಪಿಸಿ ವಂದಿಸಿದರು.