ಮೂಡಲಗಿ:ದುಷ್ಟ ಗುಂಡಾಗಿರಿ ಕಾಂಗ್ರೇಸ್ ಸರ್ಕಾರಕ್ಕೆ,ಲಿಂಗಾಯತ ವಿರೋಧಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ,ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಪ್ರಹಾರ ಮಾಡಿದ ಕಾಂಗ್ರೇಸ್ ಸರ್ಕಾರಕ್ಕೆ ದೀಕ್ಕಾರ,ದೀಕ್ಕಾರ ಎಂದು ಟೈರಗೆ ಬೆಂಕಿ ಹಚ್ಚಿ ಆಕ್ರೋಶವನ್ನು ತಾಲೂಕಿನ ಯಾದವಾಡ ಗ್ರಾಮದಲ್ಲಿ ನಡೆಯಿತು.
ಗುರವಾರ ಪಂಚಮಸಾಲಿ ಪೂಜ್ಯರ ಆದೇಶದಂತೆ ಸಮಾಜದ ಪ್ರಮುಖರು ಯಾದವಾಡ ಗ್ರಾಮದಲ್ಲಿ ಸಂಕೇತಿಕವಾಗಿ ಬಂದ ಮಾಡಿ ಧರಣಿ ನಡೆಸಿದರು.
ಲಿಂಗಾಯತ ಪಂಚಮಸಾಲಿ 2A ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಬೆಳಗಾವಿ ಸುವರ್ಣಸೌಧ ಹತ್ತಿರ ರ್ಯಾರ್ಲಿ ಹಮ್ಮಿಕೊಂಡ ಸಂದರ್ಭದಲ್ಲಿ ಪೋಲಿಸರು ಲಾಠಿ ಪ್ರಹಾರ ಮಾಡಿದರು.ಸಮಾಜಕ್ಕೆ ಮಾಡಿದ ಅಪಮಾನ ಸರ್ಕಾರ ಕೂಡಲೇ ಕ್ಷಮೆ ಯಾಚಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹುಬ್ಬಳಿ ಚನ್ನಬಸಪ್ಪ ಸ್ವಾಮಿಗಳು ನೇತ್ರತ್ವದಲ್ಲಿ ಬಸವರಾಜ ಹಿಡಕಲ,ಡಾ.ರಮೇಶ ಕವಟಗೊಪ್ಪ,ನಿಂಗಪ್ಪ ಅರಕೇರಿ,ಸುರೇಶ ಒಣಕಿ,ಹಣಮಂತ ಹೊಸಮನಿ,ಕರೇಪ್ಪ ಬಾಗೋಜಿ,ಶ್ರೀಶೈಲ ಹೆಗ್ಗಳಗಿ,ಮಲ್ಲಪ್ಪ ಹೊಸಟ್ಟಿ ಸೇರಿದಂತೆ ಅನೇಕ ಪಂಚಮಸಾಲಿ ಸಮಾಜದ ಪ್ರಮುಖರು,ವಿದ್ಯಾರ್ಥಿಗಳು ಭಾಗವಹಿಸಿದ್ದರು.