ಚೆನ್ನೈ : ದೊಮ್ಮರಾಜು ಗುಕೇಶ್ ಅವರು ಡಿಸೆಂಬರ್ 12ರಂದು ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವ ಮೂಲಕ ಇತಿಹಾಸ ಸೃಷ್ಟಿಸಿದರು. ಎಲ್ಲಾ ಭಾರತೀಯರಿಗೆ ಇದೊಂದು ಹೆಮ್ಮೆಯ, ಸಂತೋಷದ ವಿಷಯ. ಅವರು 14 ಪಂದ್ಯಗಳ ಸರಣಿಯಲ್ಲಿ ಹಾಲಿ ಚಾಂಪಿಯನ್ ಡಿಂಗ್ ಲಿರೆನ್ ಅವರನ್ನು ಸೋಲಿಸಿ ಈ ಪ್ರಶಸ್ತಿಯನ್ನು ಪಡೆದರು. ಗುಕೇಶ್‌ ಈಗ ವಿಶ್ವದ ಚೆಸ್‌ ದಂತಕಥೆ, ಮತ್ತೊಬ್ಬ ಹೆಮ್ಮೆಯ ಭಾರತೀಯ ವಿಶ್ವನಾಥನ್ ಆನಂದ್ ನಂತರ ಈ ಪ್ರಶಸ್ತಿಯನ್ನು ಗೆದ್ದ ಎರಡನೇ ಭಾರತೀಯರೆನಿಸಿದರು.

ಗುಕೇಶ್‌ ಇನ್ನೂ ಹದಿಹರೆಯದ ಯುವಕ. ಇನ್ನೂ ಟೀನೇಜ್‌, ಅಂದ್ರೆ 18 ವರ್ಷ. ಈ ಯುವ ಗ್ರ್ಯಾಂಡ್‌ಮಾಸ್ಟರ್‌ಗೆ ಲವ್‌ ಲೈಫ್‌ ಇಲ್ವಾ? ಆತ ಯಾರನ್ನೂ ಪ್ರೀತಿಸಿಲ್ವಾ? ಗರ್ಲ್‌ಫ್ರೆಂಡ್‌ ಇದ್ದಾಳಾ? ಈ ಪ್ರಶ್ನೆಯನ್ನು ಒಮ್ಮೆ ಗುಕೇಶ್‌ಗೆ ಕೇಳಲಾಯಿತು. ಈ ಪ್ರಶ್ನೆಗೆ ಅವರ ಪ್ರತಿಕ್ರಿಯೆ ಈಗ ವೈರಲ್ ಆಗುತ್ತಿದೆ.

ಚೆಸ್‌ಬೇಸ್ ಇಂಡಿಯಾದೊಂದಿಗಿನ ಸಂವಾದದಲ್ಲಿ, ಗುಕೇಶ್ ಅವರಿಗೆ ಗರ್ಲ್‌ಫ್ರೆಂಡ್ ಇದ್ದಾರೆಯೇ ಎಂದು ಕೇಳಲಾಯಿತು. ಈ ಪ್ರಶ್ನೆಗೆ 18 ವರ್ಷದ ಯುವಕ ಗುಕೇಶ್‌ ಸ್ವಲ್ಪ ಶಾಕ್‌ ಆದರು. ನಂತರ ಸ್ವಲ್ಪ ನಾಚಿಕೊಂಡರು. ನಂತರ ಉತ್ತರಿಸಿ, ತನಗೆ ಗರ್ಲ್ ಫ್ರೆಂಡ್ ಇಲ್ಲ, ಅದಕ್ಕೆ ಇದು ಸರಿಯಾದ ವಯಸ್ಸು ಅಲ್ಲ ಎಂದು ಅನಿಸುತ್ತದೆ. ಇದು ಚೆಸ್‌ನಿಂದ ನನ್ನ ಸಮಯವನ್ನು ಸೆಳೆದುಕೊಳ್ಳುತ್ತದೆ ಎಂದು ಉತ್ತರಿಸಿದರು.

“ಯಾರೂ ಇಲ್ಲ. ಬಹುಶಃ ಅದು ಚೆಸ್‌ನಿಂದ ನನ್ನ ಸಮಯವನ್ನು ಕಸಿಯುತ್ತದೆ. ನಿಜವಾಗಿಯೂ ಅದರ ಬಗ್ಗೆ ನಾನು ಹೆಚ್ಚು ಯೋಚಿಸಿಲ್ಲ. ಆ ವಿಷಯಕ್ಕೆ ಇದು ಸರಿಯಾದ ವಯಸ್ಸು ಎಂದು ನಾನು ಭಾವಿಸುವುದಿಲ್ಲ. ಅದು ದೊಡ್ಡ ವ್ಯತ್ಯಾಸ ಮಾಡದಿರಬಹುದು, ಆದರೆ ಚೆಸ್‌ನಿಂದ ಸ್ವಲ್ಪ ಸಮಯ ಕಸಿದುಕೊಳ್ಳುತ್ತದೆ” ಎಂದು ಗುಕೇಶ್ ಉತ್ತರಿಸಿದರು.

ಸಿಂಗಾಪುರದಲ್ಲಿ ನಡೆದ ವಿಶ್ವಚಾಂಪಿಯನ್‌ಶಿಪ್‌ನ ಅಂತಿಮ ಪಂದ್ಯದ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಗುಕೇಶ್ ಮತ್ತು ಡಿಂಗ್ ಲಿರೆನ್ ನಡುವಿನ ಪಂದ್ಯ ಅಪರೂಪದ್ದು. ಆಟ ಟೈಬ್ರೇಕ್‌ಗೆ ಹೋಗಿತ್ತು. 13ನೇ ಗೇಮ್‌ನ ನಂತರ, ಇಬ್ಬರೂ ತಲಾ 6.5 ಪಾಯಿಂಟ್‌ಗಳಲ್ಲಿ ಸಮಬಲಗೊಂಡರು. ಪಂದ್ಯವು ನಿರ್ಣಾಯಕವಾದ 14ನೇ ಗೇಮ್‌ನತ್ತ ಸಾಗಿತು. ಪಂದ್ಯ ಅಂತಿಮವಾಗಿ ಗುಕೇಶ್ ಪರವಾಗಿ ತಿರುಗಿತು. ಡಿಂಗ್ ಲಿರೆನ್ ಆಟದ 55ನೇ ನಡೆಯಲ್ಲಿ ಭಾರಿ ಪ್ರಮಾದ ಎಸಗಿದರು. ಇದು ಗುಕೇಶ್ ಪಂದ್ಯವನ್ನು ಗೆಲ್ಲಲು ಕಾರಣವಾಯಿತು.

ಗುಕೇಶ್ ಕೇವಲ 18ನೇ ವಯಸ್ಸಿನಲ್ಲೇ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿದ್ದಾರೆ. ಅವರು ಗ್ಯಾರಿ ಕಾಸ್ಪರೋವ್ ಮತ್ತು ಮ್ಯಾಗ್ನಸ್ ಕಾರ್ಲ್ಸೆನ್ ಅವರ ದಾಖಲೆಯನ್ನು ಮುರಿದಿದ್ದಾರೆ. ಅವರಿಬ್ಬರೂ 22ನೇ ವಯಸ್ಸಿನಲ್ಲಿ ತಮ್ಮ ಮೊದಲ ವಿಶ್ವ ಚಾಂಪಿಯನ್‌ಶಿಪ್‌ಗಳನ್ನು ಗೆದ್ದಿದ್ದರು.

ಗುಕೇಶ್ ಡಿ ಅಥವಾ ಗುಕೇಶ್ ದೊಮ್ಮರಾಜು ಹುಟ್ಟಿದ್ದು 2006ರಲ್ಲಿ. ಚೆನ್ನೈನಲ್ಲಿ ಗುಕೇಶ್ ತನ್ನ ಪೋಷಕರ ಜೊತೆಗೆ ವಾಸವಾಗಿದ್ದಾರೆ. ತೆಲುಗು ಕುಟುಂಬವಾದರೂ ಹುಟ್ಟಿ ಬೆಳೆದಿದ್ದು ಚೆನ್ನೈನಲ್ಲಿ. ಗುಕೇಶ್ ತಂದೆ ಡಾ. ರಜನೀಕಾತ್ ಇಎನ್‌ಟಿ ಸರ್ಜನ್, ತಾಯಿ ಡಾ. ಪದ್ಮಾ ಮೈಕ್ರೋಬಯೋಲಜಿಸ್ಟ್. ಗುಕೇಶ್ ತನ್ನ 7ನೇ ವಯಸ್ಸಿನಲ್ಲಿ ಚೆಸ್ ಅಭ್ಯಾಸ ಆರಂಭಿಸಿದ್ದರು.