ಲಕ್ನೋ: ಮಹತ್ವದ ಬೆಳವಣಿಗೆಯೊಂದರಲ್ಲಿ, ಉತ್ತರ ಪ್ರದೇಶದ ಸಂಭಾಲ್ನ ಖಗ್ಗು ಸರೈ ಪ್ರದೇಶದಲ್ಲಿ 46 ವರ್ಷಗಳ ನಂತರ ಶಿವ ದೇವಾಲಯವನ್ನು ಶನಿವಾರ ಪುನಃ ತೆರೆಯಲಾಗಿದೆ.
ದಶಕಗಳಷ್ಟು ಹಳೆಯದಾದ ದೇವಾಲಯವು ಪ್ರಸ್ತುತ ಶಿಥಿಲಗೊಂಡಿದೆ. ಇದು ಅತಿಕ್ರಮಣಕ್ಕೆ ಒಳಗಾಗಿದ್ದು, 1978 ರಿಂದ ಮುಚ್ಚಲಾಗಿದೆ. ಪೊಲೀಸರೊಂದಿಗೆ ನಗರಾಡಳಿತವು ಅತಿಕ್ರಮಣ ವಿರೋಧಿ ಮತ್ತು ವಿದ್ಯುತ್ ಕಳ್ಳತನದ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವಾಗ ದೇವಾಲಯ ಕಂಡುಬಂದಿದೆ. ಸಂಭಾಲ್ ಸಿಒ ಅನುಜಕುಮಾರ ಚೌಧರಿ, “ನಾವು ಸ್ಥಳವನ್ನು ಪರಿಶೀಲಿಸಿದಾಗ, ನಾವು ಇಲ್ಲಿ ದೇವಸ್ಥಾನ ಕಂಡುಕೊಂಡಿದ್ದೇವೆ” ಎಂದು ಅವರು ಹೇಳಿದರು.
ದೇವಾಲಯದಲ್ಲಿ ದೇವರ ಹಲವು ವಿಗ್ರಹಗಳು ಕಂಡುಬಂದಿವೆ. ದಲ್ಲದೇ ಇಲ್ಲಿ ಪುರಾತನ ಬಾವಿಯೂ ಪತ್ತೆಯಾಗಿದೆ. ಆಡಳಿತಾಧಿಕಾರಿಗಳ ಸಮ್ಮುಖದಲ್ಲಿ ದೇವಸ್ಥಾನದ ಬಾಗಿಲು ತೆರೆದಾಗ ಒಳಗೆ ಧೂಳು ತುಂಬಿಕೊಂಡಿರುವುದು ಕಂಡು ಬಂತು. ಸ್ವತಃ ಪೊಲೀಸರೇ ತಮ್ಮ ಕೈಯಿಂದಲೇ ಶಿವಲಿಂಗ ಮತ್ತಿತರ ದೇವಾನುದೇವತೆಗಳ ಮೂರ್ತಿಗಳನ್ನು ಸ್ವಚ್ಛಗೊಳಿಸಿದರು. ಶಿವ, ನಂದಿ, ಹನುಮಂತ ಮತ್ತು ಕಾರ್ತಿಕೇಯನ ಪುರಾತನ ವಿಗ್ರಹಗಳು ಕಂಡುಬಂದಿವೆ. ಕೋಟ್ ಗರ್ವಿಯಲ್ಲಿರುವ ಜಾಮಾ ಮಸೀದಿಯಿಂದ ಕೇವಲ ಒಂದು ಕಿಲೋಮೀಟರ್ಗಿಂತಲೂ ಹೆಚ್ಚು ದೂರದಲ್ಲಿರುವ ಖಗ್ಗು ಸರೈನಲ್ಲಿರುವ ಈ ದೇವಾಲಯವು ಕನಿಷ್ಠ 500 ವರ್ಷಗಳಷ್ಟು ಹಳೆಯದು ಎಂದು ನಂಬಲಾಗಿದೆ
ಸ್ಥಳೀಯ ಹಿಂದೂ ಸಮುದಾಯದ ಸ್ಥಳಾಂತರಕ್ಕೆ ಕಾರಣವಾದ 1978 ರ ಗಲಭೆಯ ನಂತರ ಭಸ್ಮ ಶಂಕರ ದೇವಸ್ಥಾನವನ್ನು ಮುಚ್ಚಲಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಪ್ರದೇಶದಲ್ಲಿ ವಿದ್ಯುತ್ ಕಳ್ಳತನ ವಿರೋಧಿ ಅಭಿಯಾನದ ಮೇಲ್ವಿಚಾರಣೆ ನಡೆಸುತ್ತಿದ್ದ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್ಡಿಎಂ) ವಂದನಾ ಮಿಶ್ರಾ ಅವರು ತಪಾಸಣೆಯ ವೇಳೆ ದೇವಸ್ಥಾನ ಪತ್ತೆಯಾಗಿದೆ ಎಂದು ಹೇಳಿದ್ದಾರೆ. ಇದನ್ನು ಕಂಡ ತಕ್ಷಣ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದೇನೆ ಎಂದು ಅವರು ಹೇಳಿದರು. “ನಾವೆಲ್ಲರೂ ಇಲ್ಲಿಗೆ ಬಂದಿದ್ದೇವೆ ಮತ್ತು ದೇವಾಲಯವನ್ನು ಮತ್ತೆ ತೆರೆಯಲು ನಿರ್ಧರಿಸಿದ್ದೇವೆ” ಎಂದು ಮಿಶ್ರಾ ದೃಢಪಡಿಸಿದರು, ದಶಕಗಳಿಂದ ಅದನ್ನು ಮುಚ್ಚಲಾಗಿದೆ ಎಂದು ಹೇಳಿದ ಅವರು ದೇವಾಲಯದ ಸಮೀಪದಲ್ಲಿ ಬಾವಿ ಕೂಡ ಇದ್ದು, ಅದನ್ನು ಮತ್ತೆ ತೆರೆಯಲು ಅಧಿಕಾರಿಗಳು ಯೋಜಿಸಿದ್ದಾರೆ.
ನಗರ ಹಿಂದೂ ಸಭಾದ ಪೋಷಕರಾದ ವಿಷ್ಣು ಶರಣ್ ರಸ್ತೋಗಿ, 1978 ರ ನಂತರ ದೇವಾಲಯವನ್ನು ಪುನಃ ತೆರೆಯಲಾಗಿದೆ ಎಂದು ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ರಸ್ತೋಗಿ, ತಾನು ಮತ್ತು ತನ್ನ ಕುಟುಂಬವು ದೇವಾಲಯದಲ್ಲಿ ವಾಸವಾಗಿದ್ದೆವಾದರೂ ವರ್ಷಗಳ ಹಿಂದೆ ತಮ್ಮ ಮನೆಯನ್ನು ಮಾರಿ ಈ ಪ್ರದೇಶವನ್ನು ತೊರೆದಿದ್ದೇವೆ ಎಂದು ಹೇಳಿದರು. “ನಾವು ಈ ಪ್ರದೇಶವನ್ನು ತೊರೆದಿದ್ದೇವೆ ಮತ್ತು ಈ ದೇವಾಲಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಯಾವುದೇ ಅರ್ಚಕರು ಅಲ್ಲಿ ವಾಸಿಸಲು ಸಾಧ್ಯವಾಗದ ಕಾರಣ ದೇವಾಲಯವನ್ನು ಮುಚ್ಚಲಾಯಿತು. 1978 ರಿಂದ ದೇವಾಲಯವನ್ನು ಮುಚ್ಚಲಾಗಿತ್ತು ಮತ್ತು ಇಂದು ಅದನ್ನು ತೆರೆಯಲಾಗಿದೆ, ”ಎಂದು ಅವರು ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಸಂಭಾಲ್ ಎಸ್ಡಿಎಂ ವಂದನಾ ಮಿಶ್ರಾ, ದೇವಸ್ಥಾನ ಮತ್ತು ಅದರ ಆವರಣದ ಅತಿಕ್ರಮಣವನ್ನು ತೆರವು ಮಾಡಲಾಗಿದೆ. ಸ್ಥಳೀಯರಿಂದ ವಿದ್ಯುತ್ ಕಳ್ಳತನದ ವಿರುದ್ಧದ ಅಭಿಯಾನದ ಸಂದರ್ಭದಲ್ಲಿ ಪೊಲೀಸ್ ತಂಡವು ದೇವಾಲಯ ಕಂಡುಕೊಂಡಿದೆ ಎಂದು ಹೇಳಿದರು.
ಮೊಘಲರ ಕಾಲದ ಮಸೀದಿಯಾದ ನಗರದ ಜಾಮಾ ಮಸೀದಿಯ ನ್ಯಾಯಾಲಯದ ಆದೇಶದ ಮೇರೆಗೆ ಎಎಸ್ಐ ಸಮೀಕ್ಷೆಯ ಕುರಿತು ಸಂಭಾಲ್ ಸ್ಥಳೀಯರು ಮತ್ತು ಪೊಲೀಸರ ನಡುವಿನ ಇತ್ತೀಚಿನ ಹಿಂಸಾತ್ಮಕ ಘರ್ಷಣೆಯ ಬೆಳಕಿನಲ್ಲಿ ಸಂಭಾಲ್ನಲ್ಲಿರುವ ದೇವಾಲಯದ “ಶೋಧನೆ” ಮಹತ್ವವನ್ನು ಪಡೆದುಕೊಂಡಿದೆ.ನವೆಂಬರ್ 24ರಂದು ಮಸೀದಿ ಸಮೀಕ್ಷೆ ವೇಳೆ ಸಂಭಾಲ್ನಲ್ಲಿ ಘರ್ಷಣೆ ನಡೆದಿತ್ತು. “ಹೊರಗಿನವರು” ಜೊತೆಗೆ ಸ್ಥಳೀಯರು ಮಸೀದಿಯ ಬಳಿ ಜಮಾಯಿಸಿ ಕಲ್ಲು ತೂರಾಟ ಮತ್ತು ಬೆಂಕಿ ಹಚ್ಚುವ ಮೂಲಕ ಹಿಂಸಾಚಾರ ಭುಗಿಲೆದ್ದಿತು. ಘಟನೆಯಲ್ಲಿ ನಾಲ್ವರು ಸಾವಿಗೀಡಾಗಿದ್ದು, ಹಲವರಿಗೆ ಗಾಯಗಳಾಗಿವೆ.