ಬೆಳಗಾವಿ : ಗುರುವಾರ ದಿನಾಂಕ 19 /12 /2024 ರಂದು ನಗರದ ಲಿಂಗರಾಜ ಕಾಲೇಜಿನ ಸಮಾಜಶಾಸ್ತ್ರ ಮತ್ತು ಮನೋವಿಜ್ಞಾನ ಶಾಸ್ತ್ರ ವಿಭಾಗಗಳ ವಿದ್ಯಾರ್ಥಿಗಳು ಮಹೇಶ್ ಫೌಂಡೇಶನ್ ಗೆ ತೆರಳಿ ಕ್ಷೇತ್ರ ಭೇಟಿ ನಡೆಸಿದರು.

ಸಮಾಜ ಶಾಸ್ತ್ರ ಮತ್ತು ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ನವೀನ್ ಕಣಬರ್ಗಿ ಮತ್ತು  ಡಾ. ವಾಣಿಶ್ರೀ ನೇತೃತ್ವದಲ್ಲಿ ವಿದ್ಯಾರ್ಥಿಗಳ ತಂಡ ತೆರಳಿತ್ತು.

ಯುವ ಜನಾಂಗದಲ್ಲಿ ಹರಡುತ್ತಿರುವ ಎಚ್ ಐ ವಿ ರೋಗ ಮತ್ತು ಸಾಮಾಜಿಕ ಜವಾಬ್ದಾರಿ ಕುರಿತು ವಿಶೇಷ ಅರಿವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವ ಉದ್ದೇಶ ಹೊಂದಿತು .ಮಹೇಶ್ ಫೌಂಡೇಶನ್ ನ ಮುಖ್ಯಸ್ಥ ಮಹೇಶ ಜಾಧವ ಅವರು ಮಹೇಶ ಫೌಂಡೇಶನ್ ನಡೆದು ಬಂದ ದಾರಿ ಹಾಗೂ ಅದರ ಮುಖ್ಯ ಉದ್ದೇಶ ಮತ್ತು ಪ್ರಸ್ತುತ ಅರಿವಿನೊಂದಿಗೆ ತಮ್ಮೊಡನೆ ನಡೆದ ಕೆಲವು ಘಟನೆಗಳನ್ನು ಹಂಚಿಕೊಂಡರು. ಅವರ ಉಪನ್ಯಾಸದೊಂದಿಗೆ ಕ್ಷೇತ್ರ ಭೇಟಿ ಯಶಸ್ವಿ ಆಯಿತು.