ನವದೆಹಲಿ: ಭಾರತೀಯ ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು 2021ರ ಡಿ. 8ರಂದು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಎಂಐ-17 ವಿ5 ಪತನಕ್ಕೆ ಮಾನವ ಲೋಪವೇ (ವಿಮಾನ ಸಿಬ್ಬಂದಿ) ಕಾರಣ ಎಂದು ರಕ್ಷಣಾ ಸ್ಥಾಯಿ ಸಮಿತಿಯು ಮೂರು ವರ್ಷಗಳ ನಂತರ ನೀಡಿದ ತನ್ನ ವರದಿಯಲ್ಲಿ ಹೇಳಿದೆ.
ಈ ವರದಿಯನ್ನು ಲೋಕಸಭಗೆ ಬುಧವಾರ ಸಲ್ಲಿಸಲಾಗಿದೆ. ತಮಿಳುನಾಡಿನ ಕೂನೂರು ಬಳಿ ಸಂಭವಿಸಿದ ಹೆಲಿಕಾಪ್ಟರ್ ಪತನ ದುರ್ಘಟನೆಯಲ್ಲಿ ಒಟ್ಟು 13 ಜನ ಮೃತಪಟ್ಟಿದ್ದರು.
2017ರಿಂದ 2022ರವರೆಗೆ ಭಾರತೀಯ ವಾಯು ಸೇನೆಯಲ್ಲಿ 34 ಅಪಘಾತಗಳು ಸಂಭವಿಸಿವೆ ಎಂದು 18ನೇ ಲೋಕಸಭೆಯ ರಕ್ಷಣಾ ಸ್ಥಾಯಿ ಸಮಿತಿ ವರದಿಯಲ್ಲಿ ಹೇಳಲಾಗಿದೆ. 2021-22ರಲ್ಲಿ ಒಟ್ಟು ಒಂಭತ್ತು ಅಪಘಾತಗಳು ಸಂಭವಿಸಿವೆ. 2021ರ ಡಿ. 8ರಂದು ಸಂಭವಿಸಿದ ಅಪಘಾತವು ವಿಮಾನ ಸಿಬ್ಬಂದಿಯಿಂದ ಆಗಿರುವ ಲೋಪವಾಗಿದೆ ಎಂದು ಹೇಳಲಾಗಿದೆ.