ಆರ್ಡಿ : ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಮಾರಣಕಟ್ಟೆ ಇವರಿಂದ ಶನಿವಾರ ರಾತ್ರಿ ಆರ್ಡಿ ಕೆರ್ಜಾಡಿ ಜಗಲ್ ಗುಡ್ಡೆಯ ಯತಿರಾಯ ನಿವಾಸದಲ್ಲಿ ಯಕ್ಷಗಾನ ಬಯಲಾಟ ನಡೆಯಲಿದೆ. ಶ್ರೀ ಮಾರಣಕಟ್ಟೆ ಕ್ಷೇತ್ರ ಮಹಾತ್ಮೆ ಎಂಬ ಪುಣ್ಯ ಕಥಾ ಭಾಗವನ್ನು ಹರಕೆ ಬಯಲಾಟವಾಗಿ ಆಡಿ ತೋರಿಸಲಿರುವರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರೋತ್ಸಾಹಿಸುವಂತೆ ಶ್ರೀಮತಿ ರಜನಿ ಮತ್ತು ಯತಿರಾಜ ಶೆಟ್ಟಿ ಅವರು ಮನವಿ ಮಾಡಿಕೊಂಡಿದ್ದಾರೆ.