ಬೆಳಗಾವಿ : ಬೆಳಗಾವಿ ಅಶೋಕ ನಗರದಲ್ಲಿ ಮನೆಯಲ್ಲಿನ ಬಂಗಾರ ಆಭರಣಗಳನ್ನು ಕಳ್ಳತನ ಮಾಡಿದ ಆರೋಪಿಯನ್ನು ಕೊನೆಗೂ ಮಾಳ ಮಾರುತಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಸಾದ ಮಲ್ಲಪ್ಪ ನೇಸರಗಿ (26) ಮಾಳಿಗಲ್ಲಿ, ಬೆಳಗಾವಿ ಬಂಧಿತ ಆರೋಪಿ. ಇವನು ಕಳ್ಳತನ ಮಾಡಿದ್ದ ಐದೂವರೆ ಲಕ್ಷ ಬೆಲೆಯ ಬಂಗಾರದ ಆಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.