ಬೆಳಗಾವಿ : ರಕ್ತದಾನ ಬಗ್ಗೆ ಅನೇಕ ತಪ್ಪು ಕಲ್ಪನೆಗಳು ಇದ್ದು, ರಕ್ತದಾನದಿಂದ ಬಲಹೀನತೆ ಅನೇಕ ಕಾಯಿಲೆಗಳು ಹರಡುತ್ತವೆ ಎಂಬ ತಪ್ಪು ಕಲ್ಪನೆ ಇದೆ. ಬದಲಾಗಿ ಇದರ ಹಲವು ಉಪಯೋಗಗಳು ಮಾನವನ ಶರೀರಕ್ಕೆ ಆಗುವುದು ಎಂಬುವುದು ತಿಳಿದಿರಲಿ. ಶರೀರದಲ್ಲಿ ಹೊಸ ರಕ್ತ ಹೆಚ್ಚಾಗುವದು, ರಕ್ತ ಕಣಗಳು ಸದೃಢವಾಗುತ್ತದೆ. ಹೀಗೆ ಅನೇಕ ಕಾರಣಗಳಿಂದ ಶರೀರಕ್ಕೆ ಉಪಯೋಗವಾಗುತ್ತದೆ. ಜೊತೆಗೆ ಅನೇಕರ ಜೀವ ಉಳಿಸಲು ಸಹಾಯವಾಗುತ್ತದೆ. ತಪ್ಪು ಕಲ್ಪನೆಗಳನ್ನು ಮಾಡಿಕೊಳ್ಳದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ರಕ್ತದಾನ ಮಾಡಬೇಕು ಮತ್ತು ಸಮಾಜದ ಋಣ ತೀರಿಸಲು ಪ್ರಯತ್ನಿಸಬೇಕೆಂದು
ಕೆಎಲ್ಇ ಆಸ್ಪತ್ರೆಯ ಡಾ. ಮಾಧವಪ್ರಭು ಹೇಳಿದರು.
ಜೀವನ ವಿದ್ಯಾ ಮಿಷನ್ ವತಿಯಿಂದ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ಮಾತನಾಡಿ, ಜೀವನ ವಿದ್ಯಾ ಮಿಷನ್ ಯುವಕ ಮತ್ತು ಯುವತಿಯರಿಂದ ಬೆಳಗಾವಿ ನಗರ ಹಾಗೂ ಪರಿಸರದಲ್ಲಿ ಇವರ ಸಾಮಾಜಿಕ ಕಾರ್ಯ ಬಹಳ ಆಗಿದೆ ಎಂದು ಶ್ಲಾಘಿಸಿದರು.
ಕೆಎಲ್ಇ ಆಸ್ಪತ್ರೆಯ ರಕ್ತದಾನ ವಿಭಾಗದ ಪ್ರಮುಖ ಡಾ. ಶ್ರೀಕಾಂತ ರಕ್ತದಾನದ ಬಗ್ಗೆ ಮಾಹಿತಿ ನೀಡಿ ರಕ್ತದಾನದ ಮಹತ್ವ ತಿಳಿಸಿದರು. ಜೀವನ ವಿದ್ಯಾ ಮಿಷನ್ ಅಧ್ಯಕ್ಷ ಅರವಿಂದ ಅಷ್ಟೇಕರ, ಕಾರ್ಯದರ್ಶಿಗಳಾದ ಪ್ರಶಾಂತ ಬಿರ್ಜಿ, ರಾಜೇಶ ಸಾವಂತ, ಜೇಷ್ಠ ಪ್ರಭೋದಕರಾದ ಶಂಕರರಾವ್ ಬಾಂದಕರ, ಗೋಕುಳ ಅಕಣೊಜೆ, ಜೀವನ ವಿದ್ಯಾ ಮಿಷನ್ ಯುವಕ-ಯುವತಿಯರು ಹಾಗೂ ಕೆ.ಎಲ್.ಇ. ಸಂಸ್ಥೆಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಪ್ರಶಾಂತ ಬಿರ್ಜಿ ವಂದಿಸಿದರು.