ಬೆಳಗಾವಿ : ಬಿಜೆಪಿ ಶಾಸಕ ಸಿ.ಟಿ.ರವಿ ಬಂಧನ ಪ್ರಕರಣಕ್ಕೆ ಸಂಬಂಧಿಸಿ ಖಾನಾಪುರ ಠಾಣೆಯ ಸಿಪಿಐ ಮಂಜುನಾಥ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಸಿಪಿಐ ಅಮಾನತು ಖಂಡಿಸಿ ವಿವಿಧ ಸಂಘಟನೆಗಳು ಖಾನಾಪುರ ಬಂದ್ ಗೆ ಕರೆ ನೀಡಿವೆ.
ಖಾನಾಪುರ ಠಾಣೆಯ ಸಿಪಿಐ ಮಂಜುನಾಥ್ ನಾಯಕ್ ಅಮಾನತು ಖಂಡಿಸಿ ಡಿ.26 ರಂದು ಕನ್ನಡಪರ ಸಂಘಟನೆಗಳು ಖಾನಾಪುರ ಬಂದ್ ಗೆ ಕರೆ ನೀಡಿವೆ. ಬಂದ್ ಕರೆಗೆ ಬಿಜೆಪಿ-ಜೆಡಿಎಸ್ ಪಕ್ಷಗಳು ಸಹ ಬೆಂಬಲ ಘೋಷಿಸಿವೆ.
ಸಿಪಿಐ ಅಮಾನತು ಮಾಡಿರುವುದನ್ನು ಪ್ರಶ್ನಿಸಿ ಹಾಗೂ ಅಮಾನತು ಆದೇಶ ಹಿಂಪಡೆಯುವಂತೆ ಆಗ್ರಹಿಸಿ ನಾಳೆ ಖಾನಾಪುರದಲ್ಲಿ ಪ್ರತಿಭಟನೆ ನಡೆಯುವ ಸಾಧ್ಯತೆ ಇದೆ.