ಶಬರಿಮಲೆ: ಶಬರಿಮಲೆ ಅಯ್ಯಪ್ಪ ದೇವಸ್ಥಾನವು ಈ ವರ್ಷದ ಮಕರವಿಳಕ್ಕು ಉತ್ಸವಕ್ಕಾಗಿ ಇಂದು ಮತ್ತೆ ತೆರೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ದೇವಸ್ಥಾನದ ಪ್ರಧಾನ ಅರ್ಚಕ ತಂತ್ರಿ ಕಂಡಾರರು ರಾಜೀವರು ಸಮ್ಮುಖದಲ್ಲಿ ಮೇಲುಶಾಂತಿ ಎಸ್. ಅರುಣ್ ಕುಮಾರ್ ನಂಬೂತಿರಿ ಡಿ.30ರ ಸಂಜೆ ಅಂದರೆ ಇಂದು 4 ಗಂಟೆಗೆ ದೇವಸ್ಥಾನವನ್ನು ತೆರೆಯಲಿದ್ದಾರೆ. ಗರ್ಭಗುಡಿಯಲ್ಲಿನ ಅಗ್ಗಿಷ್ಟಿಕೆ ಬೆಳಗಿಸಿದ ನಂತರ ಯಾತ್ರಾರ್ಥಿಗಳು ದರ್ಶನಕ್ಕಾಗಿ ಪವಿತ್ರ 18 ಮೆಟ್ಟಿಲುಗಳನ್ನು ಏರಬಹುದು. ಡಿ.26ರಂದು ರಾತ್ರಿ 10 ಗಂಟೆಗೆ ಮಂಡಲ ಪೂಜೆಯ ನಂತರ ಹರಿವರಾಸನಂ ಪಠಣದೊಂದಿಗೆ ದೇವಾಲಯವನ್ನು ಮುಚ್ಚಲಾಗಿತ್ತು.