ಮುಖ್ಯಾಂಶಗಳು:

ಸರ್ಕಾರಿ ಶಾಲೆಗಳಲ್ಲಿ ದಾನಿಗಳು, ಶಿಕ್ಷಣಾಭಿಮಾನಿಗಳು,ಹಳೆ ವಿದ್ಯಾರ್ಥಿಗಳ ಕೊಡುಗೆಗಳಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅವಕಾಶಗಳಿವೆ. ಮಕ್ಕಳು ಸಂಸ್ಕಾರಯುತ್ತ ಶಿಕ್ಷಣದೊಂದಿಗೆ ಜೀವನದಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು -ಸಂಸದ ಕೋಟ ಶ್ರೀನಿವಾಸ ಪೂಜಾರಿ

 

ಆವರ್ಸೆ: ಸರ್ಕಾರಿ ಶಾಲೆಗಳಲ್ಲಿ ಸರ್ಕಾರಿ ಸೌಲಭ್ಯಗಳು, ದಾನಿಗಳು, ಹಳೇ ವಿದ್ಯಾರ್ಥಿಗಳು, ಶಿಕ್ಷಣಾಭಿಮಾನಿಗಳ ಕೊಡುಗೆಗಳು ಅಮೂಲ್ಯವಾಗಿವೆ, ಶಿಕ್ಷಕರ ಶ್ರಮದಿಂದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಅವಕಾಶಗಳಿವೆ ಎಂದು ಕುಂದಾಪುರ ಶಾಸಕ ಎ.ಕಿರಣ್ ಕೊಡ್ಗಿ ಹೇಳಿದರು.
ಅವರು ಆವರ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ
ವಾರ್ಷಿಕೋತ್ಸವ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈಭವ
ಕಾರ್ಯಕ್ರಮದಲ್ಲಿ ಇತ್ತೀಚೆಗೆ ಶಾಲಾ ಹಸ್ತಪ್ರತಿ “ಕಾರಂಜಿ” ಬಿಡುಗಡೆಗೊಳಿಸಿ ಮಾತನಾಡಿದರು.
ಅರಣ್ಯ ಗುತ್ತಿಗೆದಾರ ರಾಜೀವ ಶೆಟ್ಟಿ ಚೋರಾಡಿ ಶಾಲಾ
ವಾರ್ಷಿಕೋತ್ಸವ ಉದ್ಘಾಟಿಸಿ ಶುಭ ಹಾರೈಸಿದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ,ಆವರ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಪೂಜಾರಿ,ಆವರ್ಸೆ ಶ್ರೀಶಂಕರನಾರಾಯಣ ದೇವಳದ ಆಡಳಿತ ಮೊಕ್ತೇಸರ ಸುಧಾಕರ ಶೆಟ್ಟಿ ಆವರ್ಸೆ, ವಂಡಾರು ಚಿತ್ತಾರ ಕ್ಯಾಶ್ಯೂ ಉದ್ಯಮಿ ಗೋಪಿನಾಥ ಕಾಮತ್, ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕ ಯೋಗ ನರಸಿಂಹ ಸ್ವಾಮಿ, ಹಳೆ ವಿದ್ಯಾರ್ಥಿ ಸಂಘದ
ಅಧ್ಯಕ್ಷ ಮೋಹನ್‌ದಾಸ್ ಶೆಟ್ಟಿ ಕಿರಾಡಿ,ಎಸ್‌ಡಿಎಂಸಿ ಅಧ್ಯಕ್ಷ ರಾಜೇಶ್ ನಾಯ್ಕ, ಮುಖ್ಯ ಶಿಕ್ಷಕಿ ಶಶಿಕಲಾ ಎನ್,ವಿದ್ಯಾರ್ಥಿ ನಾಯಕಿ ನಯನ, ದಾನಿಗಳು,
ಶಿಕ್ಷಣಾಭಿಮಾನಿಗಳು, ಹಳೆ ವಿದ್ಯಾರ್ಥಿಗಳು, ಎಸ್‌ಡಿಎಂಸಿ ಹಾಗೂ ವಾರ್ಷಿಕೋತ್ಸವ ಸಮಿತಿಯ
ಪದಾಧಿಕಾರಿಗಳು, ಶಿಕ್ಷಕ ವೃಂದವರು ಉಪಸ್ಥಿತರಿದ್ದರು.

ಧ್ವಜಾರೋಹಣ,ಬಹುಮಾನ ವಿತರಣೆ:
ಆವರ್ಸೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮಣ ಪೂಜಾರಿ
ಧ್ವಜಾರೋಹಣ ನೆರವೇರಿಸಿದರು. ರಕ್ಷಿತಾ ಕ್ಯಾಶ್ಯೂ ಉದ್ಯಮಿ ಸುಧಾಕರ ಶೆಟ್ಟಿ ಶಿರಂಗೂರು, ನಿವೃತ್ತ ಮುಖ್ಯ ಶಿಕ್ಷಕ ಶ್ರೀಧರ ಹೆಬ್ಬಾರ್ ಆವರ್ಸೆ, ನಿವೃತ್ತ ಮುಖ್ಯ ಶಿಕ್ಷಕ ಸೀತಾರಾಮ ಶೆಟ್ಟಿ ಆವರ್ಸೆ,ಬ್ರಹ್ಮಾವರ ತಾಲೂಕು
ಪ್ರಾಥಮಿಕ ಹಾಗೂ ಪ್ರೌಢ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ವಿಜಯ ಶೆಟ್ಟಿ, ಆವರ್ಸೆ ಗ್ರಾಮ ಪಂಚಾಯಿತಿ ಸದಸ್ಯ ಅಮರನಾಥ ಶೆಟ್ಟಿ, ದಿವಾಕರ ಗಾಣಿಗ,ರೇಣುಕಾ, ದೀಪಾ, ಜ್ಯೋತಿ, ಸಮನ್ವಯಾಧಿಕಾರಿ ಸುರೇಶ್ ಕುಂದರ್,ಬಿಆರ್‌ಪಿ ಪ್ರತಿಭಾ, ಆವರ್ಸೆ ಪ್ರೌಢ ಶಾಲೆ ಮುಖ್ಯ ಶಿಕ್ಷಕ ರಮೇಶ ಕುಲಾಲ, ಹಳೇ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಭಾಸ್ಕರ ಕಾಮತ್ ಆವರ್ಸೆ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಉಪನ್ಯಾಸಕ ಯೋಗನರಸಿಂಹ ಸ್ವಾಮಿ ಭಾಷಣ ಮಾಡಿದರು. ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ,ಪ್ರತಿಭಾ ಪುರಸ್ಕಾರ ವಿತರಣೆ,
ವಂಡಾರು ಚಿತ್ತಾರ ಕ್ಯಾಶ್ಯೂ ಉದ್ಯಮಿ ಗೋಪಿನಾಥ
ಕಾಮತ್, ವಿದ್ಯಾರ್ಥಿನಿ ಖುಷಿ ಕಾಮತ್,
ಹಳೇ ವಿದ್ಯಾರ್ಥಿನಿ ಅರ್ಪಿತಾ
ಇವರಿಗೆ ಸನ್ಮಾನ ನಡೆಯಿತು. ಅಂಗನವಾಡಿ ಮತ್ತು ಶಾಲಾ “ಮುಗ್ದ ಮಕ್ಕಳ ಸ್ನಿಗ್ದ ನೃತ್ಯ”
ಶಾಲಾ ಮಕ್ಕಳಿಂದ “ನಾಟ್ಯ ವೃಷ್ಠಿ, ವಿದ್ಯಾರ್ಥಿಗಳಿಂದ “ಅಳಿಲು ರಾಮಾಯಣ” ನಾಟಕ, ಹಳೆ ವಿದ್ಯಾರ್ಥಿಗಳಿಂದ “ಸುದರ್ಶನ ವಿಜಯ” ಯಕ್ಷಗಾನ ನಡೆಯಿತು.

ಶಿಕ್ಷಕ ಶ್ರೀನಿವಾಸ ಭಟ್ ಸ್ವಾಗತಿಸಿದರು.ಮುಖ್ಯ ಶಿಕ್ಷಕಿ ಶಶಿಕಲಾ ಎನ್ ವರದಿ ವಾಚಿಸಿದರು.ಶಿಕ್ಷಕ ಶಶಿಧರ ಶೆಟ್ಟಿ ನಂಚಾರು ನಿರೂಪಿಸಿದರು. ಶಿಕ್ಷಕ ಪ್ರವೀಣ ವಂದಿಸಿದರು.