ಬೆಳಗಾವಿ: ರಾಜ್ಯ ಸರಕಾರ ಈಗ ಬಸ್ ಪ್ರಯಾಣದರ ಏರಿಕೆ ಮಾಡಿದೆ. ಹೀಗಾಗಿ ಇನ್ನು ಮುಂದೆ ವಿವಿಧ ಸಾರಿಗೆ ನಿಗಮಗಳ ದೈನಿಕ, ಸಾಪ್ತಾಹಿಕ, ತಿಂಗಳ ಪಾಸ್ ಗಳ ಪರಿಷ್ಕರಣೆ ಆಗಿದ್ದು ಈ ಬಗ್ಗೆ ಸರಕಾರ ಆದೇಶ ಹೊರಡಿಸಿದೆ.
ಪರಿಷ್ಕೃತ ದರ ಜ. 9 ರಿಂದ ಜಾರಿಯಾಗಿದೆ. ಈ ಬಗ್ಗೆ ಬುಧವಾರ ದರಪಟ್ಟಿ ಬಿಡುಗಡೆ ಮಾಡಲಾಗಿದೆ.
ಕೆಎಸ್ಆರ್ ಟಿಸಿ ಸೇರಿ ಇತರ ಮೂರು ಸಾರಿಗೆ ನಿಗಮಗಳ ವೇಗದೂತ ಮತ್ತು ತಡೆರಹಿತ ಬಸ್ ಗಳ ಮಾಸಿಕ ಪಾಸ್ ದರ ₹70ರಿಂದ ₹420ರವರೆಗೂ ಹೆಚ್ಚಳ ಮಾಡಲಾಗಿದೆ.ಬಿಎಂಟಿಸಿ ವೋಲ್ಲೋ, ವಾಯು ವಜ್ರ ಬಸ್ಗಳ ದೈನಿಕ, ತಿಂಗಳ ಪಾಸ್ ದರದಲ್ಲಿ ಟೋಲ್ ಶುಲ್ಕ, ಜಿಎಸ್ ಟಿ ಶುಲ್ಕವನ್ನು ಸೇರ್ಪಡೆ ಮಾಡಿದೆ. ಇದರಿಂದ ಕನಿಷ್ಠ ₹10ರಿಂದ ₹150ರವರೆಗೆ ದರ ಏರಿಕೆಯಾಗಿದೆ. ಪರಿಷ್ಕೃತ ದರದ ಪಾಸ್ಗಳು ವಿತರಿಸುವವರೆಗೂ ಪ್ರಸ್ತುತ ಇರುವ ಪಾಸ್ಗಳ ಮೇಲೆ ಪರಿಷ್ಕೃತ ದರದ ಮೊಹರು ಹಾಕಿ ವಿತರಿಸಬೇಕು ಒಪ್ಪಂದದ ಮೇರೆಗೆ ಪಡೆಯುವ ವಾಹನದ ದರವೂ ಹೆಚ್ಚಳವಾಗಿದೆ.