ಬೆಳಗಾವಿ: ಲೋಕಸಭಾ ಸದಸ್ಯ ಹಾಗೂ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿದರು.
ಬೆಳಗಾವಿಯಲ್ಲಿ National Institute of food technology entrepreneurship and Management (NIFTEM) ಸ್ಥಾಪನೆಗೆ ಕೋರಿ ಜಗದೀಶ ಶೆಟ್ಟರ ಅವರು ಇತ್ತೀಚಿಗೆ ನವದೆಹಲಿಯಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಸಚಿವ ಚಿರಾಗ್ ಪಾಸ್ವಾನ್ ಅವರನ್ನು ಭೇಟಿ ಮಾಡಿ ಅಗತ್ಯವಾದ ಮನವಿಯನ್ನು ಅರ್ಪಿಸಿದ್ದು ಇಲ್ಲಿ ಸ್ಮರಣೀಯ.
ಇದಕ್ಕನುಗುಣವಾಗಿ ಸದ್ಯ ಅಗತ್ಯ ಪ್ರಸ್ತಾವನೆಯು ಅನುಮೋದನೆ ಅಥವಾ ಅಗತ್ಯ ಅನುದಾನ ಮಂಜೂರಾತಿಗಾಗಿ ಕೇಂದ್ರ ಹಣಕಾಸು ಸಚಿವರಲ್ಲಿ ಕೇಂದ್ರ ಆಹಾರ ಸಂಸ್ಕರಣಾ ಉದ್ಯಮ ಸಚಿವಾಲಯವು ಮಂಡಿಸುತ್ತಿದ್ದು, ಇದಕ್ಕೆ ಅನುಮೋದನೆ ನೀಡಿ ತಮ್ಮಲ್ಲಿನ ರೈತರಿಗೆ, ಮಧ್ಯಮದಾರರಿಗೆ, ಗ್ರಾಹಕರಿಗೆ, ಕ್ಷೇತ್ರದ ಎಲ್ಲ ಜನತೆಗೆ ಅನುಕೂಲತೆಯನ್ನು ಕಲ್ಪಿಸಿ ಕೊಡುವಂತೆ ಜಗದೀಶ ಶೆಟ್ಟರ್ ಅವರು ನಿರ್ಮಲಾ ಸೀತಾರಾಮನ್ ಅವರಲ್ಲಿ ಮನವಿ ಸಲ್ಲಿಸಿದರು.
ಬೇಡಿಕೆಯನ್ನು ಅವಲೋಕಿಸಿದ ಸಚಿವೆ ನಿರ್ಮಲಾ ಸೀತಾರಾಮನ್ ಅವರು National Institute of food technology entrepreneurship and Management (NIFTEM) ಬೆಳಗಾವಿಯಲ್ಲಿ ಸ್ಥಾಪಿಸುವ ಕುರಿತಾದ ಮಂಡಿಸುವ ಪ್ರಸ್ತಾವನೆಗೆ ಅಗತ್ಯವಾಗಿ ಅನುಮೋದನೆ ನೀಡುವ ಬಗ್ಗೆ ಭರವಸೆಯನ್ನು ನೀಡಿದ್ದಾಗಿ ಜಗದೀಶ ಶೆಟ್ಟರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.