ಬೆಳ್ವೆ : ಪ್ರತಿಷ್ಠಿತ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಗೆ ಜನವರಿ 12 ರಂದು ಚುನಾವಣೆ ನಡೆಯಲಿದ್ದು, ಕ್ರಿಯಾಶೀಲ ಯುವ ನಾಯಕ ಸತೀಶ್ ಕುಮಾರ್ ಶೆಟ್ಟಿ (ತಮ್ಮಯ್ಯ) ಮತ್ತು ಪ್ರಭಾಕರ ಶೆಟ್ಟಿ ವೈ. ಅವರು ಈ ಬಾರಿ ಸ್ಪರ್ಧಿಸುತ್ತಿರುವುದು ಚುನಾವಣಾ ಕಣಕ್ಕೆ ಹೊಸ ಹುರುಪು ತಂದಿದೆ.

ಸತೀಶ್ ಕುಮಾರ್ ಶೆಟ್ಟಿ ಅವರು ಕಟಿಂಗ್ ಪ್ಲಯರ್ ಹಾಗೂ ಪ್ರಭಾಕರ ಶೆಟ್ಟಿ ಅವರು ಗಾಳಿಪಟ ಚಿಹ್ನೆಯನ್ನು ಹೊಂದಿದ್ದಾರೆ. ಇವರಿಬ್ಬರು ಸಾಮಾನ್ಯ ಸ್ಥಾನದ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದಾರೆ.

ಜನಮನ ಗೆದ್ದಿರುವ ಸತೀಶ್: ಮೊದಲಿನಿಂದಲೂ ಸಮಾಜ ಸೇವೆಯ ತುಡಿತ ಹೊಂದಿರುವ ಸತೀಶ್ ಕುಮಾರ್ ಶೆಟ್ಟಿ ಅವರು ಈ ಬಾರಿ ಸ್ಪರ್ಧೆಗೆ ಇಳಿದು ಎಲ್ಲರ ಗಮನಸೆಳೆದಿದ್ದಾರೆ. ಸಹಕಾರಿ ಕ್ಷೇತ್ರದ ಆಳ-ಅಗಲ ಅರಿತಿರುವ ಅವರು ಹೆಚ್ಚಿನ ಮತಗಳಿಂದ ಗೆಲುವು ಕಾಣುವ ವಿಶ್ವಾಸದಲ್ಲಿದ್ದಾರೆ.

ವಿದ್ಯಾರ್ಥಿ ದಿಸೆಯಿಂದಲೇ ಜನಪರ ಕಾಳಜಿ ಹೊಂದಿದ್ದ ಅವರು ಸ್ಥಳೀಯ ಪರಿಸರದಲ್ಲಿ ತಮ್ಮ ಕ್ರಿಯಾಶೀಲ ವ್ಯಕ್ತಿತ್ವದಿಂದ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಜನಾನುರಾಗಿಯಾಗಿರುವ ಅವರು ಬಡವರು, ಆರ್ಥಿಕವಾಗಿ ತೊಂದರೆಗೆ ಸಿಲುಕಿದವರಿಗೆ ಸಹಾಯ ಹಸ್ತ ನೀಡುವ ಮೂಲಕ ತೆರೆ ಮರೆಯಲ್ಲೇ ಇದು ಕೊಡುಗೆ ದಾನಿ ಎನಿಸಿಕೊಂಡಿದ್ದಾರೆ.

ಅತ್ಯಂತ ಪ್ರತಿಷ್ಠಿತ ಮನೆತನದಲ್ಲಿ ಜನಿಸಿರುವ ಇವರು, ಉದ್ಯಮ ಕ್ಷೇತ್ರದಲ್ಲಿ ಅಪಾರ ಯಶಸ್ಸು ಕಂಡಿದ್ದಾರೆ. ಜೊತೆಗೆ ಪ್ರಗತಿಪರ ಕೃಷಿಕರಾಗಿ ಯುವಕರಿಗೆ ಮಾದರಿಯಾಗಿದ್ದಾರೆ. ಕ್ರಿಯಾಶೀಲತೆ, ಚುರುಕುತನ, ಪ್ರತಿಯೊಬ್ಬರನ್ನು ಅತ್ಯಂತ ಸ್ನೇಹಶೀಲರನ್ನಾಗಿ ನೋಡುವ ಮನೋಭಾವವುಳ್ಳ ಸತೀಶ್ ಕುಮಾರ್ ಶೆಟ್ಟಿ ಅವರ ನಿಷ್ಕಲ್ಮಷವಾದ ಹೃದಯ ವೈಶಾಲ್ಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸತೀಶ್ ಕುಮಾರ್ ಶೆಟ್ಟಿ ಅವರು ಆರ್ಡಿ, ಅಲ್ಬಾಡಿ, ಮಡಾಮಕ್ಕಿ, ಬೆಳ್ವೆ ಸುತ್ತಮುತ್ತ ಪರಿಸರದ ಚಿರಪರಿಚಿತ ವ್ಯಕ್ತಿ. ಇನ್ನೊಬ್ಬರ ಕಷ್ಟಕ್ಕೆ ಸ್ವಂದಿಸುವ ಸಹೃದಯಿ, ಸಜ್ಜನ ವ್ಯಕ್ತಿತ್ವದ ಸತೀಶ್ ಕುಮಾರ್ ಶೆಟ್ಟಿ ಈ ಭಾಗದ ಯಾವುದೇ ಮೂಲೆಯಲ್ಲೂ ಸಾಮಾನ್ಯ ಜನರ ಕಷ್ಟಕ್ಕೆ ಓಡೋಡಿ ಬರುವವರು. ಕಳೆದ 30 ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಹಳ್ಳಿ- ಹಳ್ಳಿಗಳಲ್ಲೂ ಕಾಂಗ್ರೆಸ್ ಪಕ್ಷದ ಅಭಿವೃದ್ಧಿ ಚಿಂತನೆಯನ್ನು ಬಿತ್ತಿ ಪಕ್ಷ ಸಂಘಟನೆ ಮಾಡಿದ್ದು, ಪಕ್ಷದಿಂದ ಏನನ್ನೂ ಬಯಸದ ಸಾಮಾನ್ಯ ಕಾರ್ಯಕರ್ತ ಎನ್ನುವುದನ್ನು ಯಾರು ಅಲ್ಲಗಳೆಯುವಂತಿಲ್ಲ.

ಇಂತಹ ಉತ್ತಮ ಯುವ ನಾಯಕ ಇದೀಗ ಸಹಕಾರಿ ಸಂಘದಲ್ಲಿ ಕೆಲಸ ಮಾಡುವ ಉತ್ಸಾಹ ಹೊಂದಿದ್ದು, ಈ ಬಾರಿಯ ಬೆಳ್ವೆ ವ್ಯವಸಾಯ ಸೇವಾ ಸಹಕಾರಿ ಸಂಘದ ಚುನಾವಣೆಯಲ್ಲಿ ಎಲ್ಲರೂ ಬೆಂಬಲ ನೀಡುವಂತೆ ಜನೋಪಕಾರಿಯಾಗಿರುವ ಸತೀಶ್ ಕುಮಾರ್ ಶೆಟ್ಟಿ ಅವರು ಮನವಿ ಮಾಡಿದ್ದಾರೆ.

ರಾಜಕೀಯ ಹಾಗೂ ಸಹಕಾರಿ ಸಂಘದ ಸೇವೆ ಮಾಡಬೇಕು ಎಂಬ ಅದಮ್ಯ ಹಂಬಲ ಹೊತ್ತಿರುವ ಈ ಯುವನಾಯಕ ಇದೀಗ ಸಹಕಾರಿ ರಂಗದ ಚುನಾವಣೆಯ ಆಡಳಿತ ಮಂಡಳಿಗೆ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಈ ಸಂಘವನ್ನು ಭವಿಷ್ಯದಲ್ಲಿ ಒಂದು ಮಾದರಿ ಸಂಘವನ್ನಾಗಿ ಮಾಡಬೇಕು ಎಂಬ ಕನಸು ಕಂಡಿದ್ದಾರೆ. ಅವರು ಮತಯಾಚನೆಗೆ ಹೋದಲ್ಲೆಲ್ಲ ಅಪಾರ ಬೆಂಬಲ ವ್ಯಕ್ತವಾಗುತ್ತಿರುವುದು ಚುನಾವಣೆಗೆ ಹೊಸ ರಂಗು ತಂದಿದೆ. ಸಹಕಾರಿ ಕ್ಷೇತ್ರದ ಪ್ರಜ್ಞಾವಂತ ಮತದಾರರು ಈ ಸಲದ ಚುನಾವಣೆಯಲ್ಲಿ ತಮ್ಮನ್ನು ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿ ಸೇವಾ ಕ್ಷೇತ್ರಕ್ಕೆ ತೊಡಗಿಸಿಕೊಳ್ಳುವ ತನ್ನ ಕನಸಿಗೆ ಬೆಂಬಲವಾಗಿ ನಿಲ್ಲುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ.

ಶಿಕ್ಷಕರು ವತಿಯಿಂದ ಸಹಕಾರಿ ಕ್ಷೇತ್ರಕ್ಕೆ :

ಇವರ ಜೊತೆ ಶಿಕ್ಷಕ ವೃತ್ತಿಯನ್ನು ಮಾಡಿ ಜನಮಾನಸದಲ್ಲಿ ನೆಲೆಯಾಗಿರುವ ಹೆಸರುವಾಸಿಯಾಗಿರುವ ಪ್ರಭಾಕರ ಶೆಟ್ಟಿ ವೈ. ಅವರಿದ್ದಾರೆ, ಇವರೂ ಕೂಡ ಅಪ್ಪಟ ಕಾಂಗ್ರೆಸ್ ಕಾರ್ಯಕರ್ತ ಎನ್ನುವುದು ಇಲ್ಲಿ ಉಲ್ಲೇಖನೀಯ.

ಹೆಂಗವಳ್ಳಿ ಹಕ್ಲುಮನೆ ದಿ. ನರಸಿಂಹ ಶೆಟ್ಟಿಯವರ ಪುತ್ರರಾದ ಯಳಂತೂರು ಪ್ರಭಾಕರ ಶೆಟ್ಟಿ ಅವರು ಟಿ. ಸಿ. ಎಚ್ ವೃತ್ತಿ ತರಬೇತಿಯನ್ನು ತುಮಕೂರಿನ ಸಿದ್ದಗಂಗಾ ಸಂಸ್ಥೆಯಲ್ಲಿ ಪಡೆದು ವೃತ್ತಿ ಜೀವನವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶೇಡಿಮನೆಯಲ್ಲಿ ಆರಂಭಿಸಿ ನಂತರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋಳಿಯಂಗಡಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಲ್ಪಾಡಿ ಹಾಗೂ ಕೊನೆಯದಾಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮರೂರಿನಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತಿ ಹೊಂದಿದ್ದಾರೆ. 25 ವರ್ಷಗಳ ಶಿಕ್ಷಕ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಸಹಸ್ರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಿರುವ ಸಾರ್ಥಕಥೆ ಹೊಂದಿರುವ ಅವರು, 2018 ರಲ್ಲಿ ವಯೋ ನಿವೃತ್ತಿ ಹೊಂದಿದ್ದು ಪ್ರಸ್ತುತ ಬೆಳ್ಳೆ ಗ್ರಾ. ಪಂ.ವ್ಯಾಪ್ತಿಯ ಹೊನ್ಕಲ್ಲಿನಲ್ಲಿ ವಾಸವಾಗಿದ್ದಾರೆ.

ಸರಕಾರದ ಸೌಲಭ್ಯ ಜನರಿಗೆ ತಲುಪಿಸಲು ಪ್ರಾಮಾಣಿಕ ಪ್ರಯತ್ನ:

ಸರಕಾರಿ ಕ್ಷೇತ್ರದಲ್ಲಿ ಬಡವರು, ರೈತರು, ಯುವಕರಿಗೆ ಹಾಗೂ ಮಹಿಳಾ ಸಂಘಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಸಮಗ್ರ ಮಾಹಿತಿಯನ್ನು ಅರ್ಹರಿಗೆ ನೀಡುವುದು ಹಾಗೂ ಸಹಕಾರಿ ಕ್ಷೇತ್ರದಲ್ಲಿ ಉತ್ತಮ ಗುಣಮಟ್ಟ ಹಾಗೂ ಪಾರದರ್ಶಕ ಆಡಳಿತ, ಅರ್ಹ ಯುವಕರಿಗೆ ಉದ್ಯೋಗ ಹೀಗೆ ಹಲವಾರು ಜನಪರ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಿಗೆ ಸೇವೆ ಸಲ್ಲಿಸುವುದು ಇವರಿಬ್ಬರ ಗುರಿಯಾಗಿದೆ.