ಬೆಳಗಾವಿ : ಸುಷ್ಮಾ ಸಂತೋಷ್ ಕುಲಕರ್ಣಿ ಅವರಿಗೆ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಪಿಎಚ್‌ಡಿ ಪದವಿ ದೊರೆತಿದೆ.

ಬೆಳಗಾವಿ ಚಿದಂಬರ ನಗರದ ನಿವಾಸಿಯಾಗಿರುವ ಅವರಿಗೆ ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸುಷ್ಮಾ ಸಂತೋಷ ಕುಲಕರ್ಣಿ ಅವರಿಗೆ ಪಿಎಚ್. ಡಿ ಪದವಿ ನೀಡಲಾಗಿದೆ. ಡಾ. ಸುಷ್ಮಾ ಅವರು ‘ಮಹಿಳಾ ಗ್ರಾಮ ಪಂಚಾಯಿತಿ ಸದಸ್ಯರ ಸಾಮರ್ಥ್ಯ ವೃದ್ಧಿಯಲ್ಲಿ ಮಾಧ್ಯಮದ ಪಾತ್ರ’ ಕುರಿತು ಪ್ರಬಂಧ ಮಂಡಿಸಿದ್ದರು. ಪ್ರೊ.ಓಂಕಾರ ಕಾಕಡೆ ಮಾರ್ಗದರ್ಶನ ನೀಡಿದ್ದರು.