ಜೈಪುರ : 75 ವರ್ಷದ ನಿವೃತ್ತ ಐಎಎಸ್‌ (IAS) ಅಧಿಕಾರಿಯೊಬ್ಬರು ಜೈಪುರದಲ್ಲಿ ಬಸ್ ಕಂಡಕ್ಟರ್‌ ಗೆ 10 ರೂಪಾಯಿ ಹೆಚ್ಚುವರಿ ಹಣ ನೀಡಲು ನಿರಾಕರಿಸಿದ ಆರೋಪದ ಮೇಲೆ ಅವರ ಮೇಲೆ ನಿರ್ವಾಹಕ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಈ ಘಟನೆಯ ವೀಡಿಯೊ ವೈರಲ್ ಆಗಿದೆ. ಘಟನೆ ಶುಕ್ರವಾರ ನಡೆದಿದ್ದು, ನಿವೃತ್ತ ಐಎಎಸ್‌ (IAS) ಅಧಿಕಾರಿ ತಾವು ಇಳಿಯಬೇಕಾದ ಬಸ್ ನಿಲ್ದಾಣದಲ್ಲಿ ಗೊತ್ತಾಗದೆ ಇಳಿಯದಿದ್ದಾಗ ಮುಂದಿನ ನಿಲ್ದಾಣದವರೆಗೆ ಹೋಗಲು ಅವರ ಬಳಿ 10 ರೂ ಹೆಚ್ಚುವರಿ ಹಣ ನೀಡುವಂತೆ ಕೇಳಲಾಯಿತು. ಅದಕ್ಕೆ ಅವರು ನಿರಾಕರಿಸಿದ್ದು ಈ ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ.

 

ನೋಟಾ ಸ್ಟೇಷನ್ ಹೌಸ್ ಆಫೀಸರ್ (ಎಸ್‌ಎಚ್‌ಒ) ಉದಯ್ ಸಿಂಗ್ ಪ್ರಕಾರ, ನಿವೃತ್ತ ಅಧಿಕಾರಿ ಆರ್‌.ಎಲ್. ಮೀನಾ ಅವರು ಆಗ್ರಾ ರಸ್ತೆಯಲ್ಲಿರುವ ಕನೋಟಾ ಬಸ್ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಕಂಡಕ್ಟರ್ ಅವರಿಗೆ ಆ ನಿಲ್ದಾಣದ ಬಗ್ಗೆ ತಿಳಿಸಲಿಲ್ಲ, ನಂತರ ಬಸ್ ಮುಂದಿನ ನಿಲ್ದಾಣವನ್ನು ತಲುಪಿತು. ಕಂಡಕ್ಟರ್ ಮೀನಾ ಅವರಿಗೆ ಹೆಚ್ಚುವರಿ ನಿವೃತ್ತ ಐಎಎಸ್‌ (IAS) ಅಧಿಕಾರಿ ಬಳಿ ಅಲ್ಲಿ ವರೆಗಿನ ಹೆಚ್ಚುವರಿ ದರವನ್ನು ಕೇಳಿದಾಗ ವಾಗ್ವಾದ ನಡೆಯಿತು, ಆದರೆ ನಿವೃತ್ತ ಐಎಎಸ್‌ (IAS) ಅಧಿಕಾರಿ ಅದನ್ನು ಪಾವತಿಸಲು ನಿರಾಕರಿಸಿದರು. ಕಂಡಕ್ಟರ್ ಮೀನಾ ಅವರನ್ನು ತಳ್ಳಿದ್ದಾನೆ, ಆಗ ಅವರು ಕಂಡಕ್ಟರ್‌ಗೆ ಕಪಾಳಮೋಕ್ಷ ಮಾಡಿದರು, ನಂತರ ಕಂಡಕ್ಟರ್‌ ಅವರ ಮೇಲೆ ನಿರಂತರವಾಗಿ ಅವರು ಬಸ್ಸಿನಿಂದ ಇಳಿಯುವ ವರೆಗೂ ಹಲ್ಲೆ ನಡೆಸಿದ್ದಾನೆ ಎಂದು ಸಿಂಗ್ ಹೇಳಿದರು.

ಬಸ್‌ ನಿರ್ವಾಹಕನನ್ನು ಘನಶ್ಯಾಮ ಶರ್ಮಾ ಎಂದು ಗುರುತಿಸಲಾಗಿದೆ ಎಂದು ಸಿಂಗ್ ಹೇಳಿದರು. ಶನಿವಾರದಂದು ಮೀನಾ ಅವರು ಕನೋಟಾ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಆಧಾರದ ಮೇಲೆ ಘನಶ್ಯಾಮ ಶರ್ಮಾ ವಿರುದ್ಧ ದೂರು ದಾಖಲಿಸಿದ್ದು, ತನಿಖೆ ನಡೆಯುತ್ತಿದೆ.
ದುರ್ವರ್ತನೆಗಾಗಿ ಜೈಪುರ ಸಿಟಿ ಟ್ರಾನ್ಸ್‌ಪೋರ್ಟ್ ಸರ್ವಿಸಸ್ ಲಿಮಿಟೆಡ್ ಆರೋಪಿ ಕಂಡಕ್ಟರ್‌ ಘನಶ್ಯಾಮ ಶರ್ಮಾ ಅವರನ್ನು ಅಮಾನತುಗೊಳಿಸಿದೆ ಎಂದು ವರದಿಯಾಗಿದೆ.