ಗೋಳಿಯಂಗಡಿ:ಆವರ್ಸೆ ಗ್ರಾಮದ ಮಾಡು ಒಲ್ಲದ ನಾಗೇರ್ತಿ ಶ್ರೀ ನಾಗಕನ್ನಿಕಾ ದುರ್ಗಾಪರಮೇಶ್ವರಿ ದೇವಳದಲ್ಲಿ ಜನವರಿ 14 ನೇ ಮಂಗಳವಾರ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ.

ಉಡುಪಿ ಜಿಲ್ಲೆಯಲ್ಲಿ ದೇವರತಿ (ಅರಸಮ್ಮಕಾನು),ನಾಗರತಿ (ನಾಗೇರ್ತಿ), ಚಾರುರತಿ (ಚೋರಾಡಿ), ಮಂದರತಿ (ಮಂದರ್ತಿ) ಹಾಗೂ ನೀಲಾರತಿ (ನೀಲಾವರ) ಪವಿತ್ರ ಪುಣ್ಯ ಕ್ಷೇತ್ರಗಳು.
ಈ ಕ್ಷೇತ್ರಗಳಲ್ಲಿ ಒಂದಾದ ಆವರ್ಸೆ ಗ್ರಾಮದ ಚೋರಾಡಿಯಲ್ಲಿ ಮಾಡು ಒಲ್ಲದ (ನಾಗೇರ್ತಿ) ನಾಗರತಿ ಕ್ಷೇತ್ರವು ಇತ್ತೀಚಿನ ವರ್ಷಗಳಲ್ಲಿ ಜೀರ್ಣೋದ್ಧಾರಗೊಂಡಿದೆ. ಶ್ರೀ ಕ್ಷೇತ್ರದಲ್ಲಿ ಶ್ರೀದುರ್ಗಾಪರಮೇಶ್ವರಿ ಅಮ್ಮನವರಿಗೆ
ಮೇಲ್ಛಾವಣಿ ಇಲ್ಲದ ಶಿಲಾಮಯ ಗರ್ಭಗುಡಿ, ನಾಗದೇವರಿಗೆ ಶಿಲಾಮಯ ಪೀಠ, ಶ್ರೀ ವೀರಭದ್ರ ದೇವರ ಗುಡಿಯನ್ನು ಶಿಲಾಮಯದೊಂದಿಗೆ ನೂತನವಾಗಿ ನಿರ್ಮಿಸಲಾಗಿದೆ.
ಶ್ರೀಕ್ಷೇತ್ರವು ಶ್ರೇಷ್ಠ ನಾಗತೀರ್ಥ ತಟದಲ್ಲಿದ್ದು, ಉದ್ಬವ ಸುವರ್ಣ ರೇಖಾಂಕಿತ ಲಿಂಗದ ರೂಪದಲ್ಲಿ
ಶ್ರೀ ದುರ್ಗಾಪರಮೇಶ್ವರಿ ಅಮ್ಮನವರು ನೆಲೆ ನಿಂತು ಭಕ್ತರ ಇಷ್ಠಾರ್ಥವನ್ನು ಈಡೇರಿಸುತ್ತಿದ್ದಾಳೆ. ಈ ಊರಿನಲ್ಲಿ
ಮಕ್ಕಳಿಗೆ ತೊಟ್ಟಿಲು ಕಟ್ಟ ಬಾರದು, ತೊಟ್ಟಿಲು ಕಟ್ಟಿದಲ್ಲಿ ನಾಗರ ಹಾವು ಪ್ರತ್ಯಕ್ಷವಾದ ಉದಾಹರಣೆಗಳು
ಪ್ರತೀತಿಯಲ್ಲಿದೆ. ಈ ಕ್ಷೇತ್ರಕ್ಕೆ ಅಮ್ಮನವರ ಆಣತಿಯಂತೆ ಗರ್ಭಗುಡಿಗೆ (ಮೇಲ್ಮಾಡು) ಮೇಲ್ಛಾವಣಿ,(ಮೇಲಿನ ಹೊದಿಕೆ) ರಚಿಸುವಂತಿಲ್ಲ,ಭಕ್ತರ ಇಷ್ಟಾರ್ಥ ಸಿದ್ದಿಗಾಗಿ ಹರಕೆ ರೂಪದಲ್ಲಿ ಅಸಂಖ್ಯಾತ ತುಲಾಭಾರ ಸೇವೆ, ಪ್ರತಿ ತಿಂಗಳು
ಆಶ್ಲೇಷಾ ಬಲಿ ಸೇರಿದಂತೆ ಇನ್ನಿತರ ಸೇವೆಗಳು ನಡೆಯುತ್ತವೆ.

ಕಾರ್ಯಕ್ರಮಗಳು: ಜ.14 ನೇ ಶನಿವಾರ ಬೆಳಿಗ್ಗೆ ವಾರ್ಷಿಕ ಹಬ್ಬದ ಪ್ರಯುಕ್ತ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು,ಗಂ 11 ಕ್ಕೆ ತುಲಾಭಾರ, ಮಧ್ಯಾಹ್ನ
ಗಂ 12.30 ರಿಂದ ಸಾರ್ವಜನಿಕ ಮಹಾ ಅನ್ನಸಂತರ್ಪಣೆ, ರಾತ್ರಿ ಗಂ. 9 ರಿಂದ ಶ್ರೀ ಹಟ್ಟಿಯಂಗಡಿ ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.