ಬೆಳಗಾವಿ : ಬೆಳಗಾವಿಯ ಶಿಕ್ಷಕರೊಬ್ಬರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪರೀಕ್ಷಾ ತೊಶಾ ಎಂಬ ಅರ್ಥಗರ್ಭಿತ ಕೈಪಿಡಿಯನ್ನು ಹೊರತಂದಿದ್ದಾರೆ. ಇದನ್ನು ಓದಿ ಗ್ರಹಿಸಿ ಕೊಂಡಾಗ ಉಜ್ವಲ ಭವಿಷ್ಯ ಎನ್ನುವಂತೆ ಮಕ್ಕಳಿಗೆ ಅತಿ ಉಪಯುಕ್ತವಾದ ಕಡಿಮೆ ಸಮಯದ ಓದಿನಲ್ಲಿ ಬಹಳಷ್ಟು ಪ್ರಶ್ನೆಗಳಿಗೆ ಉತ್ತರಿಸುವ ಜಾಣ್ಮೆಯನ್ನು ಉಂಟುಮಾಡುವ ಮತ್ತು ಓದಲು ಕ್ಷಣ ಕ್ಷಣ ಅಭಿರುಚಿ ನೀಡುವ ಪುಸ್ತಕವನ್ನು

ಎನ್ .ಎಫ್. ಕಿತ್ತೂರ ಹಿಂದಿ ಶಿಕ್ಷಕರು ಬೆಳಗಾವಿ ಅವರು ಹೊರ ತಂದಿರುವ ಬಹಳ ಅಮೂಲ್ಯವಾದ ಗ್ರಂಥವಿದು.
ಈ ಪುಸ್ತಕದಲ್ಲಿ ಎರಡು ಭಾಗಗಳನ್ನು ಮಾಡಲಾಗಿದೆ

 

ಭಾಗ-ಒಂದು: ಕಡಿಮೆ ಉತ್ತರದ ಪ್ರಶ್ನೆಗಳು, ಇದರಲ್ಲಿ ಒಂದು ಮತ್ತು ಎರಡು- ಮೂರು ವಾಕ್ಯಗಳ ಪ್ರಶ್ನೆಗಳು ಉತ್ತರದೊಂದಿಗೆ ಮತ್ತು ಬಹಳ ಮಹತ್ವಪೂರ್ಣ ಪ್ರಶ್ನೆಗಳು ಉತ್ತರ ಸಹಿತ ಮತ್ತು ನಾಲ್ಕು ಉತ್ತರಗಳ ಬಹು ವಿಕಲ್ಪಿಯ ಎಂಬ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವ ಪ್ರಶ್ನೆಗಳನ್ನೂ ಕೂಡ ಸರಳ ರೂಪದಲ್ಲಿ ಉತ್ತರ ಸಹಿತ ವಿವರಿಸಲಾಗಿದೆ.

ಭಾಗ ಎರಡರಲ್ಲಿ ನಾಲ್ಕರಿಂದ ಆರು ವಾಕ್ಯಗಳ ಪ್ರಶ್ನೆಗಳ ಉತ್ತರಗಳು. ಇದರಲ್ಲಿ ಹಿಂದಿ ಪದ್ಯ ಭಾಗ, ಹಿಂದಿ ಪದ್ಯದ ಭಾವಾರ್ಥ, ಅ ಪಠಿತ ಗದ್ಯದ ಪ್ಯಾರಾಗ್ರಾಫ್ ಮತ್ತು ಉತ್ತರಗಳು ಕನ್ನಡ ಅಥವಾ ಇಂಗ್ಲಿಷ್ ನಲ್ಲಿ ಅನುವಾದ, ನಿಬಂಧ, ಪತ್ರ ಹೀಗೆ ಎರಡೂ ಭಾಗಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮಕ್ಕಳಿಗೆ ಉತ್ತಮ ಅಂಕ ತೆಗೆದು ಕೊಂಡು ಪಾಸ್ ಆಗಲು ಹಾಗೂ ಅತ್ಯುನ್ನತ ಶ್ರೇಣಿಯಲ್ಲಿ ಅಂಕ ಪಡೆಯಲು ಸರಳ ರೂಪದಲ್ಲಿ ಬರೆದಿದ್ದಾರೆ. ಎಲ್ಲಕ್ಕಿಂತ ಮೇಲಾಗಿ ಸ್ಕೋರಿಂಗ್ ಪ್ಯಾಕೇಜ್ ಕೂಡ ರಾಮಬಾಣದಂತಿದೆ. ಇದರಿಂದ ಪರೀಕ್ಷೆಗೆ ಕುಳಿತ ಎಲ್ಲ ಮಕ್ಕಳು ಬಹಳಷ್ಟು ವಿಷಯಗಳನ್ನು ಹಂಚಿಕೊಳ್ಳಬಹುದು.
ಈ ಪುಸ್ತಕ ಬೇಕಾದವರು ಮಾಹಿತಿಗೆ ಸಂಪರ್ಕಿಸಬಹುದು.
ನೋಮಾನ್ ಜಾನಾಬ್ ಬಿಲ್ಡಿಂಗ್, ಶಿಂಧೆ ಬೇಕರಿ ಹತ್ತಿರ,
ಶಿವಶಕ್ತಿ ನಗರ, ಜಟ್‌ಪಟ್ ಕಾಲೊನಿ, ಅನಗೋಳ, ಬೆಳಗಾವಿ – 590006
ದೂರವಾಣಿ ಸಂಖ್ಯೆ: 9341644495