
ಬೆಳಗಾವಿ : ಸಂಗೊಳ್ಳಿ ರಾಯಣ್ಣನ ಹುತಾತ್ಮ ದಿನದ ಅಂಗವಾಗಿ ನಂದಗಡ ರಾಯಣ್ಣನ ಸಮಾಧಿ ದರ್ಶನ ಪಡೆದು ವಾಪಸಾಗುತ್ತಿದ್ದ ಹಳೆ ಹುಬ್ಬಳ್ಳಿ ಈಶ್ವರ ನಗರದ ರಮೇಶ ಅಂದೆಪ್ಪ ಅಂಬಿಗೇರ (20) ಮತ್ತು ಎಸ್.ಎಂ.ಕೃಷ್ಣ ನಗರದ ಮದನ ಚಂದ್ರಕಾಂತ ಮೇಟಿ(20)ಎಂಬ ಯುವಕರು ರವಿವಾರ ಮೃತಪಟ್ಟಿದ್ದಾರೆ. ಕಿತ್ತೂರಿನಿಂದ ಹುಬ್ಬಳ್ಳಿಗೆ ಹೋಗುತ್ತಿರುವಾಗ ಈ ಬೈಕ್ ಸವಾರರು ರಾಷ್ಟ್ರೀಯ ಹೆದ್ದಾರಿ 48ರ ಬಳಿ ಮರಕ್ಕೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.