
ಬೆಳಗಾವಿ : ಬೆಳಗಾವಿಯಲ್ಲಿ
ಟ್ರ್ಯಾಕ್ಟರ್ ಹಾಯ್ದು ಬಾಲಕ ಮೃತಪಟ್ಟ ಘಟನೆ ನಡೆದಿದೆ. ಕಣ ಬರ್ಗಿಯ ಆರುಷ್ ಮಹೇಶ ಮೋದೇಕರ ಮೃತಪಟ್ಟ ಬಾಲಕ. ಬಾಲಕ ಮದುವೆಯಲ್ಲಿ ಭಾಗವಹಿಸಲು ಬಂದಿದ್ದ. ಮಂಟಪದೊಳಗೆ ಆಟವಾಡುತ್ತಿದ್ದಾಗ ಮಣ್ಣು ತುಂಬಿಸಿಕೊಂಡು ಹೋಗುತ್ತಿದ್ದ ಟ್ಯಾಕ್ಟರ್ ಮಂಟಪದೊಳಗೆ ನುಗ್ಗಿ ಡಿಕ್ಕಿ ಹೊಡೆದಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ. ಆದರೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗಾವಿ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.