ಮದುವೆಗೆ ಬಂದವರ ವ್ಯಾನಿಟಿ ಬ್ಯಾಗ್ ಸಮೇತ ಪರಾರಿಯಾಗಿದ್ದ ಕಳ್ಳನ ಬಂಧನ : 3.5 ಲಕ್ಷ ಆಭರಣ ವಶಕ್ಕೆ
ಬೆಳಗಾವಿ :
ಬೆಳಗಾವಿ ಪೊಲೀಸರು ಖತರ್ನಾಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಿನಾಂಕ 4-1.2024 ರಂದು ಮಾಳಮಾರುತಿ ಠಾಣಾ ವ್ಯಾಪ್ತಿಯ ವಿದ್ಯಾಧಿರಾಜ ಕಲ್ಯಾಣ ಮಂಟಪದಲ್ಲಿ ಮದುವೆಗೆ ಆಗಮಿಸಿದ ಪಂಚಾಕ್ಷರಿ ಎಂ.ಕೆ., ದಾವಣಗೆರೆ ಇವರ ಹೆಂಡತಿಯ ವೆನಿಟಿ ಬ್ಯಾಗಿನಲ್ಲಿ ಇಟ್ಟಿದ್ದ ಸುಮಾರು 3,51,000 ಮೌಲ್ಯದ ಬಂಗಾರದ ಆಭರಣ ಹಾಗೂ 3500/- ಹಣ ಹೀಗೆ ಒಟ್ಟು 3,54, 500 ಗಳಷ್ಟು ವಸ್ತುಗಳನ್ನು ವೆನಿಟಿ ಬ್ಯಾಗ್ ಸಮೇತ ಕಳುವು ಮಾಡಿಕೊಂಡು ಹೋಗಿದ್ದ.
ಆರೋಪಿತನನ್ನು ಮಾಳಮಾರುತಿ ಪೊಲೀಸ್ ಠಾಣೆಯವರು ಇಂದು ಪತ್ತೆ ಮಾಡಿದ್ದಾರೆ. ಕಳ್ಳತನ ಮಾಡಿದ ಆರೋಪಿ ಇಮ್ತಿಯಾಜ್ ಮಹಮ್ಮದ್ ಗೌಸ್ ಹುಬ್ಳಿವಾಲೆ – 63 ವರ್ಷ ಸಾ. ವೀರಭದ್ರನಗರ ಬೆಳಗಾವಿ ಈತನನ್ನು ವಶಕ್ಕೆ ಪಡೆದುಕೊಂಡು, ಈತನಿಂದ ಕಳ್ಳತನ ಮಾಡಿದ ಬಂಗಾರದ ಆಭರಣ ಹಾಗೂ ಹಣವನ್ನು ಮರಳಿ ಜಫ್ತುಪಡಿಸಿಕೊಳ್ಳಲಾಗಿದೆ.
ಆರೋಪಿತನ ವಿರುದ್ಧ ಕಾನೂನು ಕ್ರಮ ಕೈಗೊಂಡು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.