
ನವದೆಹಲಿ : ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಶುಕ್ರವಾರ ಸಂಜೆಯವರೆಗೆ 50 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ.
ಅಧಿಕೃತ ಅಂಕಿಅಂಶಗಳ ಪ್ರಕಾರ, ಶುಕ್ರವಾರ ಸಂಜೆ 6 ಗಂಟೆ ವರೆಗೆ 92.84 ಲಕ್ಷ ಜನರು ಪವಿತ್ರ ನದಿಗಳಲ್ಲಿ ಸ್ನಾನ ಮಾಡಿದ್ದಾರೆ. ಗುರುವಾರ ರಾತ್ರಿ 8 ಗಂಟೆಯವರೆಗೆ ಒಟ್ಟು ಸಂಖ್ಯೆ 49.14 ಕೋಟಿ ಜನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದರು. ಮಹಾಕುಂಭ ಮೇಳದಲ್ಲಿ ಭಾರತದ ಹೊರತಾಗಿ”ಅಮೆರಿಕ, ರಷ್ಯಾ, ಇಂಡೋನೇಷ್ಯಾ, ಬ್ರೆಜಿಲ್, ಸ್ಪೇನ್, ಜರ್ಮನಿ, ಇಟಲಿ, ನೇಪಾಳ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಮೊದಲಾದ ರಾಷ್ಟ್ರಗಳಿಂದ ಭಕ್ತರು ಆಗಮಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.
ಭಾರತ ಮತ್ತು ಚೀನಾವನ್ನು ಹೊರತುಪಡಿಸಿ ವಿಶ್ವದ ಯಾವುದೇ ದೇಶವು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ ಈ ಸಂಖ್ಯೆಗೆ ಸರಿಸಮವಾದ ಒಟ್ಟು ಜನಸಂಖ್ಯೆಯನ್ನು ಹೊಂದಿಲ್ಲ.
ಅಮೆರಿಕದ ಸೆನ್ಸಸ್ ಬ್ಯೂರೋ ಪ್ರಕಾರ, ವಿಶ್ವದ ಟಾಪ್ 10 ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಭಾರತ (1,41,93,16,933), ಚೀನಾ (1,40,71,81,209), ಯುಎಸ್ (34,20,34,432), ಇಂಡೋನೇಷ್ಯಾ (28,35,87,097), ಪಾಕಿಸ್ತಾನ (25,704) (24,27,94,751), ಬ್ರೆಜಿಲ್ (22,13,59,387), ಬಾಂಗ್ಲಾದೇಶ (17,01,83,916), ರಷ್ಯಾ (14,01,34,279) ಮತ್ತು ಮೆಕ್ಸಿಕೊ (13,17,41,347) ಜನಸಂಖ್ಯೆಗಳನ್ನು ಹೊಂದಿದೆ.
ಕುಂಭಮೇಳದ ಆರಂಭದಲ್ಲಿ, ಮಹಾಕುಂಭಕ್ಕೆ 45 ಕೋಟಿ ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಯೋಗಿ ಆದಿತ್ಯನಾಥ ತಿಳಿಸಿದ್ದರು. ಫೆಬ್ರವರಿ 11 ರ ವೇಳೆಗೆ ಈ ಮೈಲಿಗಲ್ಲು ದಾಟಿತ್ತು. ಫೆಬ್ರವರಿ 14 ರ ವೇಳೆಗೆ ಸ್ನಾನ ಮಾಡುವವರ ಸಂಖ್ಯೆ 50 ಕೋಟಿ ದಾಟಿದೆ. ಇನ್ನು 12 ದಿನಗಳ ಕಾಲ ಮಹಾಕುಂಭ ಮೇಳ ನಡೆಯಲಿದ್ದು, ಪಾಲ್ಗೊಳ್ಳುವವರ ಒಟ್ಟು ಸಂಖ್ಯೆ 55 ರಿಂದ 60 ಕೋಟಿ ದಾಟುವ ನಿರೀಕ್ಷೆ ಇದೆ.
ಮೌನಿ ಅಮವಾಸ್ಯೆಯಂದೇ ಎಂಟು ಕೋಟಿ ಭಕ್ತರು ಪುಣ್ಯಸ್ನಾನ ಮಾಡಿದರು. ಮಕರ ಸಂಕ್ರಾಂತಿಯಂದು 3.5 ಕೋಟಿ ಭಕ್ತರು ಅಮೃತ ಸ್ನಾನದಲ್ಲಿ ಪಾಲ್ಗೊಂಡಿದ್ದರು. ಜನವರಿ 30 ಮತ್ತು ಫೆಬ್ರವರಿ 1 ರಂದು ಎರಡು ಕೋಟಿಗೂ ಹೆಚ್ಚು ಭಕ್ತರು ಸ್ನಾನ ಮಾಡಿದರು. ಪೌಶ್ ಪೂರ್ಣಿಮಾ 1.7 ಕೋಟಿ ಭಕ್ತರು ಪವಿತ್ರ ಸ್ನಾನವನ್ನು ಮಾಡಿದರು. ಬಸಂತ್ ಪಂಚಮಿಯಂದು 2.57 ಕೋಟಿ ಭಕ್ತರು ಧಾರ್ಮಿಕ ಸ್ನಾನದಲ್ಲಿ ಪಾಲ್ಗೊಂಡಿದ್ದರು. ಮಾಘಿ ಪೂರ್ಣಿಮೆಯ ಮಹತ್ವದ ಸ್ನಾನದ ಹಬ್ಬವು ತ್ರಿವೇಣಿ ಸಂಗಮದಲ್ಲಿ ಎರಡು ಕೋಟಿಗೂ ಹೆಚ್ಚು ಭಕ್ತರು ಸ್ನಾನ ಮಾಡಿದರು.
ಮಹಾಕುಂಭ ಮೇಳವು ಜನವರಿ 13 ರಂದು ಪ್ರಯಾಗ್‌ರಾಜ್‌ನಲ್ಲಿ ಆರಂಭವಾಗಿದ್ದು, ಫೆಬ್ರವರಿ 26 ರವರೆಗೆ ನಡೆಯಲಿದೆ.