ದೆಹಲಿ : ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಹತ್ತು ದಿನಗಳ ನಂತರ ದೆಹಲಿಯ ಮುಂದಿನ ಸಿಎಂ ಆಯ್ಕೆಗಾಗಿ ಬಿಜೆಪಿ ತನ್ನ ಶಾಸಕಾಂಗ ಪಕ್ಷದ ಸಭೆಯನ್ನು ನಡೆಸಲಿದೆ. ಫೆ.19ರಂದು ಸಭೆ ನಿಗದಿಯಾಗಿದ್ದು, ಬಳಿಕ ನೂತನ ಸಿಎಂ ಹೆಸರನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು. ಮರುದಿನ ಸಂಜೆ 4:30ಕ್ಕೆ ರಾಮಲೀಲಾ ಮೈದಾನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಬಿಜೆಪಿಯ ಉನ್ನತ ನಾಯಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ.