ಕಕ್ಕೇರಿ :
ಸ್ಥಳೀಯ ವಿವಿದೊದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ನಿ.2023-24ನೇ ಸಾಲಿನ ಮುಂದಿನ ಐದು ವರ್ಷಗಳ ಅವಧಿಗಾಗಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬುಧವಾರ ಡಿ.3 ರಂದು ಚುನಾವಣೆ ಸ್ಥಳೀಯ ಸಂಘದ ಕಚೇರಿಯಲ್ಲಿ ನಡೆಯಿತು.
11 ಜನ ಚುನಾಯಿತ ಸದಸ್ಯರು ಹಾಗೂ ಒಂದು ಸ್ಥಾನ ಬಿನ್ ಸಾಲಗಾರ ಅವಿರೋಧ ಆಯ್ಕೆಯಾದರು. ಬಿಜೆಪಿ ಮುಖಂಡ ಪ್ರಕಾಶ ಅಂಬೋಜಿ, ಮಾಜಿ ಮಂಡಲ ಪಂಚಾಯತ ಪ್ರಧಾನ ಯಲ್ಲಪ್ಪ ಗುಪಿತ , ರೈತ ವಿಕಾಸ ಪ್ಯಾನಲ್ 8. ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಮುಖಂಡ ರಿಯಾಜ್ ಅಹ್ಮದ್ ಪಟೇಲ್ ಹಾಗೂ ಬಿಷ್ಠಾದೇವಿ ಮಂದಿರದ ಅಧ್ಯಕ್ಷ ಕಾರ್ತಿಕ ಅಂಬೋಜಿ ಅವರ ಪ್ರಗತಿ ಪತ ಪ್ಯಾನಲ್ 3 ಅಭ್ಯರ್ಥಿಗಳು ಜಯಗಳಿಸಿದರು.
ರೈತ ವಿಕಾಸ ಪ್ಯಾನಲ್ ವತಿಯಿಂದ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಮಂಡಲ ಪಂಚಾಯತ್ ಪ್ರಧಾನ ಯಲ್ಲಪ್ಪ ಗುಪಿತ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಸನ್ನ ದೊಡ್ಡೆಬೈಲಕರ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷ ಯಲ್ಲಪ್ಪ ಗುಪಿತ, ಹಾಗೂ ಉಪಾಧ್ಯಕ್ಷ ಡಾ.ಪ್ರಸನ್ನ ದೊಡ್ಡೆಬೈಲಕರ, ಅವಿರೋಧ ಆಯ್ಕೆಯಾದರು,
ಈ ಸಂದರ್ಭದಲ್ಲಿ ರೈತ ವಿಕಾಸ ಪ್ಯಾನಲ್ ಸದಸ್ಯರಾದ ಶಿವಲಿಂಗ ಚನ್ನಾಪುರ, ಮಹಮ್ಮದ್ ಹನೀಫ್ ಚಿಕ್ಕೋಡಿ, ಶಿವಾಜಿ ತಳವಾರ, ಮನೋಹರ ಬೋಸಲೆ, ಚೆನ್ನಮ್ಮ ಗುಪಿತ, ಇತರರು ಆಯ್ಕೆಯಾದರು. ಚುನಾವಣೆ ಅಧಿಕಾರಿಯಾಗಿ ಶಂಕರ ಎಸ್ ಕರಬಸನವರ, ಸಹಾಯಕ ಚುನಾವಣೆ ಅಧಿಕಾರಿಯಾಗಿ ಸಂಘದ ಕಾರ್ಯದರ್ಶಿ ಕೃಷ್ಣ ಪರೀಟ ಕಾರ್ಯನಿರ್ವಹಿಸಿದರು.