
ಯಾದಗಿರಿ : ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳು ಜೋರಾಗಿ ನಡೆದಿವೆ. ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಮುಖ್ಯಮಂತ್ರಿ ಆಕಾಂಕ್ಷಿಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಬೆಂಬಲಿಗರ ಮಧ್ಯೆ ವಾಗ್ಯುದ್ಧಕ್ಕೂ ಕಾರಣವಾಗಿದೆ. ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ ಅವರ ವಿಚಾರದಲ್ಲಿ ಅಧಿಕಾರ ಹಂಚಿಕೆ ಸೂತ್ರ ಸಿದ್ಧಪಡಿಸಿದೆ ಎನ್ನಲಾಗಿದೆ.ಕಳೆದ ದಿನಗಳಿಂದ ಡಿ.ಕೆ. ಶಿವಕುಮಾರ ಅವರ ಬಣದ ನಾಯಕರು ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಿ ಶಿವಕುಮಾರ ಅವರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಸಿದ್ದರಾಮಯ್ಯ ಬೆಂಬಲಿಗರು ಮುಖ್ಯಮಂತ್ರಿ ಬದಲಾವಣೆ ಬೇಡ ಎಂದು ಆಗ್ರಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಕೋಡಿಮಠ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ದೇಶ-ವಿದೇಶಗಳಲ್ಲಿ ಏನೇನಾಗಲಿದೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಅವರನ್ನು ಬದಲಾವಣೆ ಮಾಡುವುದು ಅಷ್ಟು ಸುಲಭವಲ್ಲ ಎಂದು ಹೇಳಿದ್ದಾರೆ. ಮುಂದೆ ಏನಾಗಲಿದೆ ಎಂದು ಯುಗಾದಿ ನಂತರ ಹೇಳುವುದಾಗಿ ತಿಳಿಸಿದ್ದಾರೆ. ಅಂದರೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ಸುಲಭವಲ್ಲ ಎಂದು ಅವರು ಹೇಳಿದ್ದಾರೆ.
ಯಾದಗಿರಿಯಲ್ಲಿ ಭಾನುವಾರ ಮಾತನಾಡಿರುವ ಕೋಡಿಮಠ ಶ್ರೀಗಳು, ಎಲ್ಲಾ ಸಮುದಾಯದ ಎಲ್ಲಾ ಜಾತಿ ಎಲ್ಲಾ ವರ್ಗದವರು ಈ ಭೂಮಿ ಮೇಲೆ ವಾಸವಿದ್ದಾರೆ. ಪ್ರಾಚೀನ ಕಾಲದಿಂದಲೂ ಹಾಲಮತ ಸಮಾಜದವರು ಅಡವಿಯಲ್ಲಿದ್ದು ಕುರಿಗಳನ್ನ ಸಾಕುವುದನ್ನು ಮಾಡುತ್ತ ಬಂದಿದ್ದಾರೆ. ಕುರಿಯ ಇಕ್ಕಿಯಲ್ಲಿ ಲಿಂಗವನ್ನ ಕಂಡವರು. ಪ್ರಕೃತಿ ಮೇಲೆ, ಗಾಳಿಯ ಮೇಲೆ, ಭೂಮಿಯ ಮೇಲೆ ಅವರು, ಕಂಡದ್ದು ನೋಡಿದ್ದು ಹಾಗೂ ಅನುಭವಕ್ಕೆ ಬಂದಿದ್ದನ್ನು ಹೇಳುತ್ತಾ ಬಂದಿದ್ದಾರೆ. ಹಾಲು ಕೆಟ್ಟರೂ ಹಾಲಮತ ಸಮಾಜ ಕೆಡುವುದಿಲ್ಲ ಎಂದು ಹೇಳುತ್ತಾರೆ. ಇವತ್ತು ಹಾಲಮತ ಸಮಾಜದವರ ಕೈಯಲ್ಲಿ ರಾಜ್ಯದ ಅಧಿಕಾರವಿದೆ. ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅವರಾಗಿಯೇ ಬಿಡಬೇಕು. ನೀವು ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಮುಂದೆ ಏನಾಗಲಿದೆ ಎಂದು ಯುಗಾದಿ ನಂತರ ಹೇಳುತ್ತೇನೆ ಎಂದು ಹೇಳಿದ್ದಾರೆ.
ಯುಗಾದಿಯ ಬಳಿಕ ಹೋದ ವರ್ಷಕ್ಕಿಂತ ಈ ವರ್ಷ ಇನ್ನು ಭೀಕರಕತೆ ಕಾಡುವ ಲಕ್ಷಣಗಳಿವೆ. ಭೂಮಿ ಅಗಲಾಗೊಂದು(ಭೂಕಂಪ) ಸಾವು ನೋವು ಸಂಭವಿಸಬಹುದು, ಕಟ್ಟಡಗಳು ನೆಲಕುರುಳುವುದು ಮುಂದುವರಿಯಲಿದೆ. . ಭೂ ಸುನಾಮಿ,ಜಲ ಸುನಾಮಿ, ಬಾಹ್ಯ ಸುನಾಮಿ ಎಂದು ಹೇಳುತ್ತಿವೆ. ಈವರೆಗೆ ಬರಿ ಜಲ ಸುನಾಮಿ ಸಂಭವಿಸುತ್ತಿತ್ತು. ಈ ಬಾರಿ ಭೂ ಸುನಾಮಿ ಕೂಡ ಸಂಭವಿಸಲಿದೆ ಎಂದು ಕೋಡಿಹಳ್ಳಿ ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಇದನ್ನ ಯುಗಾದಿ ನಂತರ ಹೇಳುತ್ತೇನೆ ಎಂದರು.