
ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೋಡಿ ಮಠದ ಶ್ರೀಗಳು ಮತ್ತೊಂದು ಭಯಾನಕ ಭವಿಷ್ಯ ನುಡಿದಿದ್ದಾರೆ.
ಆದರೆ, ರಾಜ್ಯದ ಕಾಂಗ್ರೆಸ್ ಸರ್ಕಾರದ ಬದಲಾವಣೆಗಳ ಬಗ್ಗೆ ಭವಿಷ್ಯ ನುಡಿದಿರುವ ಕೋಡಿ ಶ್ರೀಗಳು, ಸದ್ಯಕ್ಕೇನೂ ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಏನೂ ತೊಂದರೆಯಿಲ್ಲ ಎಂದಿದ್ದಾರೆ. ಆದರೆ ಬರುವ ದಿನಗಳು ಶುಭಮತ್ತು ಅಶುಭಗಳಿಂದ ಕೂಡಿವೆ. ಈ ಬಗ್ಗೆ ಯುಗಾದಿ ಸಮಯದಲ್ಲಿ ಹೇಳುತ್ತೇನೆ ಎಂದು ಹೇಳಿದರು.
ಈ ಬೇಸಿಗೆ ಕಾಲದಲ್ಲಿ ಭೂಮಿಯ ತಾಪಮಾನ ಬಹಳಷ್ಟು ಏರಿಕೆಯಾಗಲಿದೆ ಎಂದು ಕೋಡಿ ಶ್ರೀಗಳು ಎಚ್ಚರಿಕೆ ನೀಡಿದ್ದಾರೆ.