ಬೆಂಗಳೂರು : ಕರ್ನಾಟಕದ ಕರಾವಳಿ ಭಾಗ ತಾಪಮಾನ ಹೆಚ್ಚಳದಿಂದ ಬಿಸಿ ಕೆಂಡವಾಗಿ ಮಾರ್ಪಟ್ಟಿದೆ. ಕರಾವಳಿ ಭಾಗದ ಅನೇಕ ಪ್ರದೇಶಗಳಲ್ಲಿ ತಾಪಮಾನ ಬುಧವಾರ ತಾಪಮಾನ 1.6°C ನಿಂದ 3.0°Cರಷ್ಟು ಹೆಚ್ಚಳವಾಗಿದೆ. ಬುಧವಾರ (ಮಾರ್ಚ್ 12) ಬೆಳಿಗ್ಗೆ 8:30ಕ್ಕೆ ಕೊನೆಗೊಂಡಂತೆ 24 ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಾವಂತವಾಡ ಹೋಬಳಿಯಲ್ಲಿ ಕರ್ನಾಟಕದಲ್ಲೇ ಅತಿ ಹೆಚ್ಚು ಅಂದರೆ ಗರಿಷ್ಠ 42.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಉಷ್ಣಾಂಶ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ತಿಳಿಸಿದೆ.
ಮಾರ್ಚ್ 12ರಂದು ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವು ಸ್ಥಳಗಳು ಮತ್ತು ಉಡುಪಿ ಮತ್ತು ಕೊಡಗು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಿನ ತಾಪಮಾನ ದಾಖಲಾಗಿದೆ.

ಕೆಎಸ್‌ಎನ್‌ಡಿಎಂಸಿ (KSNDMC) ಹವಾಮಾನ ಮೇಲ್ವಿಚಾರಣಾ ಜಾಲದ ಪ್ರಕಾರ, ಉತ್ತರ ಕನ್ನಡ ಜಿಲ್ಲೆಯ 14 ಸ್ಥಳಗಳು, ದಕ್ಷಿಣ ಕನ್ನಡ ಜಿಲ್ಲೆಯ 11 ಸ್ಥಳಗಳು, ಉಡುಪಿ ಜಿಲ್ಲೆಯ 2 ಸ್ಥಳಗಳು, ಕೊಡಗು ಜಿಲ್ಲೆಯ 1 ಸ್ಥಳವು 38°C ಅದಕ್ಕಿಂತ ಹೆಚ್ಚು ಮತ್ತು ರಾಜ್ಯದ ಉಳಿದ ಭಾಗಗಳು 40 ಡಿಗ್ರಿ ಸೆಲ್ಸಿಯಸ್ ಮತ್ತು ಹೆಚ್ಚಿನ ತಾಪಮಾನ ದಾಖಲಿಸಿದೆ. ಮಂಗಳವಾರ ಕರಾವಳಿ ಕರ್ನಾಟಕದ ಕೆಲವು ಸ್ಥಳಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚು (1.6°C ನಿಂದ 3.0°C) ಮತ್ತು ರಾಜ್ಯದಾದ್ಯಂತ ಸಾಮಾನ್ಯ (-1.5°C ನಿಂದ 1.5°C) ತಾಪಮಾನ ದಾಖಲಾಗಿದೆ.

ಉತ್ತರ ಕನ್ನಡ ಜಿಲ್ಲೆ
ದಾಂಡೇಲಿ ತಾಲೂಕಿನ ದಾಂಡೇಲಿ ಹೋಬಳಿ 38.2°C, ಕಾರವಾರ ತಾಲೂಕಿನ ಸಾವಂತವಾಡ ಹೋಬಳಿ 42.9°C (ರಾಜ್ಯದಲ್ಲೇ ಅತಿ ಹೆಚ್ಚು), ಕಾರವಾರ ತಾಲೂಕಿನ ಕಿನ್ನರ ಹೋಬಳಿ 41.8°C, ಕಾರವಾರ ತಾಲೂಕಿನ ಘದಾಸಾಯ ಹೋಬಳಿ 42.3 °C, ಕುಮಟಾ ತಾಲೂಕಿನ ಮಿರ್ಜಾನ್ ಹೋಬಳಿ 40.7°C, ಮುಂಡಗೋಡು ತಾಲೂಕಿನ ಪಾಳಾ ಹೋಬಳಿ 40.0°C, ಸಿದ್ದಾಪುರ ತಾಲೂಕಿನ ಉಂಬಳಮನೆ ಹೋಬಳಿ 38.3°C, ಹಳಿಯಾಳ ತಾಲೂಕಿನ ಸಾಂಬ್ರಾಣಿ
ಹೋಬಳಿ 39.0°C, ಹಳಿಯಾಳ ತಾಲೂಕಿನ ಮುರ್ಕ್ವಾಡ 39.2°C, ಭಟ್ಕಳ ತಾಲೂಕಿನ ಭಟ್ಕಳ 1 ಹೋಬಳಿ 38.3°C, ಅಂಕೋಲಾ ತಾಲೂಕಿನ ಅಂಕೋಲಾ ಹೋಬಳಿ 40.5°C, ಅಂಕೋಲಾ ತಾಲೂಕಿನ ಬೇಲಿಕೆರೆ (ಅವರ್ಸಾ) ಹೋಬಳಿ 40.2°C, ಅಂಕೋಲಾ ತಾಲೂಕಿನ ಅಂಕೋಲಾ 1 ಹೋಬಳಿ 39.5°C, ಅಂಕೋಲಾ ತಾಲೂಕಿನ ಬ್ಲಾಳೆ ಹೋಬಳಿ 39.2°C ಉಷ್ಣಾಂಶ ದಾಖಲಾಗಿದೆ.
ದಕ್ಷಿಣ ಕನ್ನಡ
ಉಳ್ಳಾಲ ತಾಲೂಕಿನ ಮಂಗಳೂರು (ಬಿ) ಹೋಬಳಿ 38.4°C, ಕಡಬ ತಾಲೂಕಿನ ಕಡಬ ಹೋಬಳಿ 41.0°C, ಮೂಡಬಿದ್ರಿ ತಾಲೂಕಿನ ಮೂಡಬಿದ್ರಿ ಹೋಬಳಿ 39.5°C, ಸುಳ್ಯ ತಾಲೂಕಿನ ಸುಳ್ಯ-1 ಹೋಬಳಿ 41.3°C, ಪುತ್ತೂರು ತಾಲೂಕಿನ ಪುತ್ತೂರು 1 ಹೋಬಳಿ 40.6 °C, ಬೆಳ್ತಂಗಡಿ ತಾಲೂಕಿನ ಕೊಕ್ಕಡ ಹೋಬಳಿ 42.0°C, ಬಂಟ್ವಾಳ ತಾಲೂಕಿನ ಬಂಟ್ವಾಳ 1 ಹೋಬಳಿ 39.5°C, ಬಂಟ್ವಾಳ ತಾಲೂಕಿನ ಪಾಣೆ ಮಂಗಳೂರು 40.6°C, ಬಂಟ್ವಾಳ ತಾಲೂಕಿನ ವಿಟ್ಲ 39.5°C, ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ ಹೋಬಳಿ 39.9°C, ಪುತ್ತೂರು ತಾಲೂಕಿನ ಉಪ್ಪಿನಂಗಡಿ 40.8°C ದಾಖಲಾಗಿದೆ.
ಉಡುಪಿ ಹಾಗೂ ಕೊಡಗು
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಸಂಪಾಜೆ 40.2°C, ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಹೆಬ್ರಿ 1 ಹೋಬಳಿ 40.2°C, ಕುಂದಾಪುರ ತಾಲೂಕಿನ ವಂಡ್ಸೆ ಹೋಬಳಿ 39.9°C ಉಷ್ಣಾಂಶ ದಾಖಲಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ತಾಪಮಾನ ಸಂಬಂಧಿ ಸಲಹೆ ನೀಡಿದ್ದು, ಜನರು ಬೆಳಿಗ್ಗೆ 11 ರಿಂದ ಸಂಜೆ 4 ರವರೆಗೆ ಹೊರಾಂಗಣದಲ್ಲಿ ದೈಹಿಕ ಚಟುವಟಿಕೆಯಿಂದ ಆದಷ್ಟು ದೂರ ಇರುವಂತೆ ಸೂಚಿಸಿದೆ. ಮತ್ತು ತೆಳುವಾದ ಹಾಗೂ ಸಡಿಲವಾದ ಹತ್ತಿಯ ಉಡುಪುಗಳನ್ನು ಧರಿಸಬೇಕು, ಅದರಲ್ಲಿಯೂ ಬಿಳಿ ಬಣ್ಣದ ಹತ್ತಿಯ ಬಟ್ಟೆಗಳನ್ನು ಧರಿಸಬೇಕು ಎಂದು ಸಲಹೆ ನೀಡಿದೆ.
“ಉಪ್ಪು ಹಾಕಿದ ಮಜ್ಜಿಗೆ ಮತ್ತು ಗ್ಲೂಕೋಸ್ ಬೆರೆಸಿದ ನೀರು ನೀರನ್ನು ಸಾಕಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳುವಂತೆ ಸೂಚಿಸಿದೆ. ಹೊರಾಂಗಣಕ್ಕೆ ಹೋಗಿ ಬಿಸಿಲಿನ ಝಳಕ್ಕೆ ಮೈಒಡ್ಡಿ ಬಂದ ತಕ್ಷಣ ಚಹಾ, ಕಾಫಿ ಕುಡಿಯಬೇಡಿ ಅಥವಾ ಜೇನುತುಪ್ಪವನ್ನು ಸೇವಿಸಬೇಡಿ ಎಂದು ಅದು ಸಲಹೆ ನೀಡಿದೆ.