ಬೆಳಗಾವಿ :
ಬೆಳಗಾವಿ ಪ್ರವೇಶಿಸುವ ಕೋಟೆ ಕೆರೆಯ ದಡದಲ್ಲಿ ಕುಳಿತಿದ್ದವರನ್ನು ಶೆಡ್ ನೊಳಗೆ ಕೂಡಿಹಾಕಿ ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ.

ಗಾಂಜಾ ನಶೆಯಲ್ಲಿ ಏಳು ಜನ ಅನ್ಯಕೋಮಿನ ಯುವಕರು ಸೇರಿ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಬೆಳಗಾವಿ ಹೊರವಲಯದ ಯಮನಪುರದ  (22),  (23) ವರ್ಷದ ಇಬ್ಬರು ಹಲ್ಲೆಗೊಳಗಾದವರು.

ಯುವತಿ ಸರ್ಕಾರದ ಯುವ ನಿಧಿ ಯೋಜನೆಯ ಅರ್ಜಿ ಸಲ್ಲಿಸಲು ಸಹೋದರನ ಜೊತೆಗೆ ಬೆಳಗಾವಿಗೆ ಆಗಮಿಸಿದ್ದರು. ಸರ್ವರ್ ಸಮಸ್ಯೆ ಇದೆ ಮಧ್ಯಾಹ್ನ 3 ಗಂಟೆಗೆ ಬನ್ನಿ ಎಂದು ಸೇವಾ ಕೇಂದ್ರದ ಸಿಬ್ಬಂದಿ ಹೇಳಿದ್ದಾರೆ. ಇದೇ ಕಾರಣಕ್ಕೆ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಕೋಟೆ ಕೆರೆ ದಡದಲ್ಲಿ ಕುಳಿತಿದ್ದ ಇವರನ್ನು ಅನ್ಯಕೋಮಿನ ಯುವಕರು ಥಳಿಸಿದ್ದಾರೆ. ಮುಸ್ಲಿಂ ಹುಡುಗಿ ಜೊತೆ ಏಕೆ ಕುಳಿತಿದ್ದಿಯಾ ಎಂದು ಯುವಕನ ಜೊತೆ ಜಗಳ ತೆಗದಿರುವ ಯುವಕರು ಮನಬಂದಂತೆ ಥಳಿಸಿದ್ದಾರೆ. ಆಗ ಅವರು ನಾವು ಪ್ರೇಮಿಗಳಲ್ಲ ಅಕ್ಕ-ತಮ್ಮ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಆದರೂ ಸಾಲದೆಂಬಂತೆ ತನ್ನ ಚಿಕ್ಕಪ್ಪನಿಗೂ ಫೋನ್ ಮಾಡಿ ಮನವರಿಕೆ ಮಾಡಲು ಇಬ್ಬರು ಪ್ರಯತ್ನಿಸಿದ್ದಾರೆ.

ಆದರೆ  ಫೋನ್ ಸ್ವಿಚ್ ಆಫ್ ಮಾಡಿ ಕೋಟೆ ಕೆರೆ ಪಕ್ಕದ ವರಿಗೆ ಕಳೆದು ಎಳೆದು ಕೂಡಿಹಾಕಿ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಕೆಲ ಹೊತ್ತಿನ ಬಳಿಕ ಮತ್ತೆ ಫೋನ್ ಮಾಡಿದ್ದಾರೆ ಅವರ ಚಿಕ್ಕಪ್ಪ.

ಈ ಸಂದರ್ಭದಲ್ಲಿ ಮೊಬೈಲ್ ಸ್ವಿಚ್ ಆಗುತ್ತಿದ್ದಂತೆ ಎಪಿಎಂಸಿ ಪೊಲೀಸ್ ಠಾಣೆಗೆ ಯುವಕನ ಪೋಷಕರು ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ ಕೋಟೆಕೆರೆ ಸುತ್ತಲೂ ಇವರಿಬ್ಬರಿಗೆ ಅವರ ಚಿಕ್ಕಪ್ಪ ವಾಲಪ್ಪ ಲಮಾಣಿ ಹುಡುಕಾಟ ನಡೆಸಿದ್ದಾರೆ.

ಆಗ ಕಿರುಚಾಟದ ಶಬ್ದ ಕೇಳಿ ಚಿಕ್ಕಪ್ಪ ಅಲ್ಲಿಗೆ ನುಗ್ಗಿದ್ದಾರೆ. ಅಲ್ಲಿ ದೃಶ್ಯ ಬೆಳಕಿಗೆ ಬಂದಿದೆ. ವಾಲಪ್ಪ ಅವರು ಇಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ವಾಲಪ್ಪ ಲಮಾಣಿ ಅವರು ಮಾರ್ಕೆಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಬೆಳಗಾವಿ ಮಾರ್ಕೆಟ್ ಪೊಲೀಸರು ಆರೋಪಿಗಳಿಗೆ ಶೋಧಕಾರ್ಯ ನಡೆಸಿದ್ದಾರೆ.