ಬೆಳಗಾವಿ: 2024-25 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಂಪಗಾವಿಯ ಆರ್ ಈ ಎಸ್ ಪ್ರೌಢ ಶಾಲೆಯ ಜನನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಪ್ರಥಮ ಸುಶ್ಮಿತಾ ಬಸವರಾಜ್ ನೇಸರಗಿ 601 ಅಂಕ 96.16/, ದ್ವಿತೀಯ ಸ್ಥಾನ, ವೀರೇಶ್ ಬಸವರಾಜ್ ಚಿವಟಗುಂಡಿ 584 ಅಂಕ 93.44/, ತೃತೀಯ ರಶ್ಮಿ ರುದ್ರಪ್ಪ ಬೆಣ್ಣಿ 579 ಅಂಕ 93/ ಸಾಧನೆ ಮಾಡಿದ್ದಾರೆ. ಇವರಿಗೆ ಆಡಳಿತ ಮಂಡಳಿಯ ಚೇರ್ಮನ್ ಶಂಕರಪ್ಪ ಬಿ ಸಿದ್ನಾಳ, ವೈಸ್‌ ಚೇರ್ಮನ್ ಮಹಾಂತೇಶ ಜಕಾತಿ, ಕಾರ್ಯದರ್ಶಿ ಬಸವರಾಜ ಉಳ್ಳಾಗಡ್ಡಿ, ಮುಖ್ಯ ಶಿಕ್ಷಕ ಎಸ್ಎಸ್ ಉಳ್ಳಾಗಡ್ಡಿ, ಶಿಕ್ಷಕರು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರು ಅಭಿನಂದನೆ ಸಲ್ಲಿಸಿದ್ದಾರೆ.