
ಹೆಬ್ರಿ : ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ವಾತಾವರಣವಿದ್ದು ದೇಶದ ರಕ್ಷಣೆಗೆ ನಿಂತಿರುವ ಸೈನಿಕರ ಯಶಸ್ಸು ಹಾಗೂ ಮನೋಸ್ಥೈರ್ಯ ಹೆಚ್ಚಿಸುವಂತೆ ಹೆಬ್ರಿಯ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸುಧೀರ್ ನಾಯಕ್ ಅವರ ಸಾರಥ್ಯದಲ್ಲಿ ಅಮೃತ ಭಾರತೀ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ ವಿಷ್ಣು ಸಹಸ್ರನಾಮಾವಳಿ ಹಾಗೂ ಪ್ರಾರ್ಥನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜು ಆಡಳಿತ ಮಂಡಳಿಯ ಹಾಗೂ ಹಾಸ್ಟೆಲ್ ಕಮಿಟಿಯ ಅಧ್ಯಕ್ಷ ರಾಜೇಶ್ ನಾಯಕ್ , ಅಮೃತ ಭಾರತಿ ಟ್ರಸ್ಟ್ ನ ವಿಶ್ವಸ್ಥ ಸುಧೀರ್ ನಾಯಕ್ , ಹಾಸ್ಟೆಲ್ ಕಮಿಟಿಯ ಸದಸ್ಯ ರಾಮಕೃಷ್ಣ ಆಚಾರ್ಯ , ಕ್ಯಾಂಪಸ್ ಮೇಲ್ವಿಚಾರಕ ರಾಘವೇಂದ್ರ , ಚೀಫ್ ವಾರ್ಡನ್ ನಿತಿನ್ , ನಿಲಯ ಪಾಲಕರು , ಅಮೃತ ಭಾರತಿ ವಸತಿ ನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.