
ಬಜಪೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.)ಬಜಪೆ ಯೋಜನಾ ಕಛೇರಿ ವ್ಯಾಪ್ತಿಯ ಕಾವೂರು ವಲಯದ ಶಾಂತಿನಗರದ ರಂಗಮಂಟಪದಲ್ಲಿ ಶ್ರೀ ರಾಮ ಭಜನಾ ಮಂಡಳಿ ಶಾಂತಿನಗರ, ಹಿಂದೂ ಯುವಸೇನೆ ಶ್ರೀ ಶಕ್ತಿ ಶಾಖೆ, ಅಂಬಿಕಾನಗರ ಶಾಂತಿನಗರ, ವಿಶ್ವ ಹಿಂದು ಪರಿಷತ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಶ್ರೀರಾಮ ಶಾಖೆ, ಶಾಂತಿನಗರ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಜ್ಪೆ ಹಾಗೂ ಶ್ರೀ ಕ್ಷೇತ್ರ ಮಂಜುನಾಥೇಶ್ವರ ಭಜನಾ ಪರಿಷತ್ ಇವರ ಸಹಯೋಗದಲ್ಲಿ ಕುಣಿತ ಭಜನಾ ತರಬೇತಿ ಕಾರ್ಯಕ್ರಮ ನಡೆಯಿತು.
ಉದ್ಘಾಟನೆಯನ್ನು ನಿವೃತ್ತ ಶಿಕ್ಷಕ, ಬಾಲ ಸಂಸ್ಕಾರ ಕೇಂದ್ರದ ಮಾತಾಜಿ ವಾಣಿ ಗೋಖಲೆಯವರು ದೀಪ ಬೆಳಗಿಸಿ, ಸಣ್ಣ ವಯಸ್ಸಿನಲ್ಲೇ ಭಜನಾ ಸಂಸ್ಕಾರ ದೊರೆತರೆ ಮಕ್ಕಳ ಮನಸ್ಸು ವಿಚಲಿತವಾಗುವುದಿಲ್ಲ. ಈ ನಿಟ್ಟಿನಲ್ಲಿ ಇಂತಹ ತರಬೇತಿಗಳು ಅತೀ ಅವಶ್ಯಕ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಶ್ರೀರಾಮ ಭಜನಾ ಮಂದಿರದ ಮಹಿಳಾ ಸಂಘ ದ ಅಧ್ಯಕ್ಷೆ ಹೇಮಲತಾ,ಶ್ರೀರಾಮ ಭಜನಾ ಮಂದಿರದ ಉಪಾಧ್ಯಕ್ಷ ಮಾಧವ ಕಾಂತನಬೆಟ್ಟು, ಹಿಂದೂ ಯುವಸೇನೆ ಅಧ್ಯಕ್ಷ ಜಗನ್ನಾಥ್ ಶೆಟ್ಟಿ, ಯೋಜನೆಯ ಕೇಂದ್ರ ಒಕ್ಕೂಟ ಅಧ್ಯಕ್ಷ ರಾಜೇಶ್ ಶೆಟ್ಟಿ,ಯೋಜನಾಧಿಕಾರಿ ಗಿರೀಶ್ ಕುಮಾರ್ ಎಂ ರವರು ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯಚಟುವಟಿಕೆಗಳ ಬಗ್ಗೆ ಹಾಗೂ ಧಾರ್ಮಿಕ ಶೃದ್ದಾ ಕೇಂದ್ರಗಳಲ್ಲಿ ನಿರಂತರವಾಗಿ ಭಜನಾ ಕಾರ್ಯಕ್ರಮಗಳು ನಡೆದು ಸನಾತನ ಪರಂಪರೆಯ ಅಸ್ತಿತ್ವವನ್ನು ಬೆಳೆಸಬೇಕು ಎಂದರು.
ಭಜನಾ ಪರಿಷತ್ ನ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ ಅಳಿಯೂರು ರವರು ತರಭೇತಿ ಶಿಬಿರವನ್ನು ಆಯೋಜಿಸಿದ ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳಿಗೆ ಅಭಿನಂದನೆ ತಿಳಿಸಿ ಬಾಲಸಂಸ್ಕಾರದೊಂದಿಗೆ ಕುಣಿತ ಮತ್ತು ಕುಳಿತು ಹಾಡುವ ಭಜನಾ ಕಾರ್ಯಕ್ರಮದ ಬಗ್ಗೆ ಹಾಗೂ ಸಪ್ಟಂಬರ್ ತಿಂಗಳಲ್ಲಿ ಧರ್ಮಸ್ಥಳದಲ್ಲಿ ನಡೆಯಲಿರುವ ಭಜನಾ ಕಮ್ಮಟದ ಮಾಹಿತಿ ನೀಡಿದರು.ಸದುಪಯೋಗ ಪಡೆದುಕೊಳ್ಳುವಂತೆ ವಿನಂತಿಸಿದರು.
ವಿದ್ಯಾರ್ಥಿಗಳ ಪೋಷಕರು,ಒಕ್ಕೂಟ ಪದಾಧಕಾರಿಗಳು, ಗ್ರಾಮಸ್ಥರು ಭಾಗವಹಿಸಿದ್ದರು.
ಜ್ಞಾನವಿಕಾಸ ಸಮನ್ವಯಧಿಕಾರಿ ಶೋಭಾ ಸ್ವಾಗತಿಸಿದರು, ವಲಯದ ಎಲ್ಲಾ ಸೇವಾಪ್ರತಿನಿಧಿಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಪೂರ್ಣಲತಾ ನಿರೂಪಿಸಿದರು.ವಲಯ ಮೇಲ್ವಿಚಾರಕ ಅಭಿಮಾನ್ ಜೈನ್ ಧನ್ಯವಾದವಿತ್ತರು.