ಶಿರಸಿ: ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು ಇದರ ಸಿಬ್ಬಂದಿ ಯಲ್ಲಾಪುರ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಗಿರಿಧರ ನಾಯ್ಕ ಮಂಚಿಕೇರಿಯವರ ಶಿರಸಿಯಲ್ಲಿ ಸನ್ಮಾನಿಸಲಾಯಿತು.

ಗಿರಿಧರ ನಾಯ್ಕ ಅವರು ಯಲ್ಲಾಪುರ ಮುಂಡಗೋಡ ತಾಲೂಕುಗಳಲ್ಲಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು ಈ ಕಾರಣ ಜಿಲ್ಲೆಯ ಎಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಪರವಾಗಿ ಶಿರಸಿ ಕಚೇರಿಯಲ್ಲಿ ಗುರುವಾರ ಗೌರವಪೂರ್ವಕವಾಗಿ ಸನ್ಮಾನಿಸಿ ಬಿಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಗಿರಿಧರ ನಾಯ್ಕ ಅವರು ಮಾತನಾಡಿ ಸಾಮಾಜಿಕ ಪರಿಶೋಧನೆ ನಮ್ಮ ಬದುಕಿಗೆ ಮರುಜನ್ಮ ನೀಡಿದ ವ್ಯವಸ್ಥೆ ನೂರಾರು ಅನುಭವ ಸವಾಲಗಳನ್ನು ಎದುರಿಸುವ ಪರಿಯನ್ನು ಕಲಿಸಿದೆ. ಎಷ್ಟೋ ಜನರ ಒಡನಾಟ ಕೊಟ್ಟಿದೆ. ನಿರ್ದೇಶನಾಲಯ ಅನೇಕ ಅವಕಾಶಗಳನ್ನು ನಮಗೆ ಒದಗಿಸಿದ್ದು ಅನ್ನ ಕೊಟ್ಟ ನಿರ್ದೇಶನಾಲಾಯಕ್ಕೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಗಣಪತಿ ಹೆಗಡೆ ಮಾತನಾಡಿ ಸದಾ ನಿಮ್ಮಂತ ಹಿರಿಯರ ಮಾರ್ಗದರ್ಶನ ನಮಗೆ ಬೇಕು ಒಡನಾಟ ನಿರಂತರ ಇರಲಿ ಎಂದರು.
ಈ ಸಂಧರ್ಭದಲ್ಲಿ ಜಿಲ್ಲೆಯ ಎಲ್ಲಾ ತಾಲೂಕುಗಳ ಕಾರ್ಯಕ್ರಮ ವ್ಯವಸ್ಥಾಪಕರು ಸ್ನೇಹ ಜೀವಿ ಗಿರೀಧರ ನಾಯ್ಕ ಅವರ ಒಡನಾಟ ಅವರ ಪ್ರೀತಿ ಮಾತು ಮಾರ್ಗದರ್ಶನ ನೆನೆದು ಗದ್ಗರಿತರಾದರು. ಸೇವೆಯಿಂದ ತಾವು ನಿವೃತ್ತಿ ಹೊಂದಿರಬಹುದು ನಮ್ಮ ಜಿಲ್ಲೆಗೆ ಸಾಮಾಜಿಕ ಪರಿಶೋಧನೆ ಗೆ ತಮ್ಮ ಮಾರ್ಗದರ್ಶನ ಅವಶ್ಯಕತೆ ಅಗತ್ಯ ಎಂದು ಕೇಳಿಕೊಂಡರು.
ಎಲ್ಲರೂ ಸೇರಿ ಅವರನ್ನು ಸಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಫಲತಾಂಬೂಲ ಹಾಗೂ ಕಿರು ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ವಿವಿಧ ತಾಲೂಕುಗಳ ಕಾರ್ಯಕ್ರಮ ವ್ಯವಸ್ಥಾಪಕರಾದ ನಾಗರಾಜ್ ಹಬ್ಬು, ಉಮೇಶ ಮುಂಡಳ್ಳಿ, ಚಿದಾನಂದ ಗೌಡ ,ನಜೀರಾ ಬೇಗಂ, ಲೋಹಿತ್ ಕುಮಾರ್ ಪೂಜಾರಿ, ರಾಜೇಶ್ ದೇಸಾಯಿ, ಮಾರುತಿ ಕರಿಭೀಮಪ್ಪನವರ್ ಹಾಗೂ ಶಿರಸಿ ತಾಲೂಕು ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಭುವನ ಹಾಗೂ ಸುಜಾತ ಹಾಜರಿದ್ದರು.
ಕಾರವಾರ ಕಾರ್ಯಕ್ರಮ ವ್ಯವಸ್ಥಾಪಕ ನಾಗರಾಜ್ ಹಬ್ಬು ಸ್ವಾಗತಿಸಿದರು ಭಟ್ಕಳ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಮುಂಡಳ್ಳಿ ಭಾವಪೂರ್ಣ ಗೀತೆ ಹಾಡಿ ಕಾರ್ಯಕ್ರಮ ನಿರ್ವಹಿಸಿದರು. ಶಿರಸಿ ಕಾರ್ಯಕ್ರಮ ವ್ಯವಸ್ಥಾಪಕ ಲೋಹಿತ್ ಕುಮಾರ್ ಪೂಜಾರಿ ವಂದಿಸಿದರು.