
ಶಂಕರನಾರಾಯಣ : ಮಕ್ಕಳಲ್ಲಿರುವ ಕಲ್ಪನಾ ಶಕ್ತಿ ಮತ್ತು ಭಾವನೆಗಳನ್ನು ಅಭಿವ್ಯಕ್ತ ಪಡಿಸುವ ಹಾಗೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವಿಜಯ ಕರ್ನಾಟಕ ಪತ್ರಿಕೆಯು ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯವರೊಂದಿಗೆ ಶ್ಯಾಮಿಲಿ ಸಭಾಭವನ ಅಂಬಲಪಾಡಿ ಉಡುಪಿ ಇಲ್ಲಿ ದಿನಾಂಕ 6/7/2025 ರಂದು ಆಯೋಜಿಸಲಿರುವ ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ ಗೆ ಇಲ್ಲಿನ ಮದರ್ ತೆರೇಸಾ ಮೆಮೋರಿಯಲ್ ಶಾಲೆ ಶಂಕರನಾರಾಯಣದ ವಿದ್ಯಾರ್ಥಿಗಳಾದ ರಶ್ಮಿತಾ .ಆರ್ 8ನೇ ತರಗತಿ ಹಾಗೂ ಶ್ರೀಕರ್ ಭಟ್ 6 ನೇ ತರಗತಿಆಯ್ಕೆಯಾಗಿದ್ದಾರೆ. ಈ ಮೂಲಕ ಶಾಲೆಯ ಕೀರ್ತಿಯನ್ನು ಜಿಲ್ಲಾ ಮಟ್ಟಕ್ಕೆ ಕೊಂಡೊಯ್ದು ಆಡಳಿತ ಮಂಡಳಿಯವರು ಹಾಗೂ ಪ್ರಾಂಶುಪಾಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.