
ಬೆಳಗಾವಿ : ಪಾಟೀಲ ಬಾಳಗೌಡ ಗಣಪತಿ (ಯರನಾಳ) ಅವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ರಾಜ್ಯಶಾಸ್ತ್ರ ವಿಷಯದಲ್ಲಿ ಸಲ್ಲಿಸಿದ “ಇಂಪ್ಯಾಕ್ಟ್ ಆಫ್ ಇಂಬ್ಯಾಲೆನ್ಸ್ಡ್ ಗ್ರೋಥ್ ಆನ್ ಇಂಡಿಯನ್ ಫೆಡರಲಿಸಂ: ಎಂಪೆರಿಕಲ್ ಎನಾಲಿಸಿಸ್ ಪೋಸ್ಟ್ 2000” ಎಂಬ ವಿಷಯಕ್ಕೆ ಪಿಎಚ್‌ಡಿ ಪ್ರದಾನ ಮಾಡಿದೆ.
ಪ್ರಸ್ತುತ ಸಂಕೇಶ್ವರದ ಎಸ್. ಡಿ. ವಿ. ಎಸ್. ಸಂಘದ ಶ್ರೀ ಶಿವರುದ್ರೇಶ್ವರ ಕಲಾ ಹಾಗೂ ಪಟ್ಟಣ ಪಂಚಾಯತ್ ವಿಜ್ಞಾನ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ಉಪನ್ಯಾಸಕರಾದ ಇವರಿಗೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಪ್ರೊ. ಕಮಲಾಕ್ಷಿ ತಡಸದ ಅವರು ಮಾರ್ಗದರ್ಶನ ಮಾಡಿದ್ದರು.
ಇವರಿಗೆ ಎಸ್. ಡಿ. ವಿ. ಎಸ್. ಸಂಘದ ಅಧ್ಯಕ್ಷ ಎ. ಬಿ. ಪಾಟೀಲ, ಮಾಜಿ ಸಚಿವರು, ಆಡಳಿತ ಮಂಡಳಿಯ ಸರ್ವ ಸದಸ್ಯರು, ಪ್ರಾಚಾರ್ಯರು, ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕಾಲೇಜು ರಾಜ್ಯಶಾಸ್ತ್ರ ಅಧ್ಯಾಪಕರ ಸಂಘದ ಸರ್ವ ಪದಾಧಿಕಾರಿಗಳು, ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.