ಅಥಣಿ-
ಸ್ವಾಮಿ ವಿವೇಕಾನಂದರ 161 ನೇ ಜನ್ಮದಿನ ಹಾಗೂ ರಾಷ್ಟ್ರೀಯ ಯುವ ದಿನಾಚರಣೆಯ ಪ್ರಯುಕ್ತ ಇಂದು ನಗರದ ವಿವೇಕಾನಂದ ವ್ರತ್ತದಲ್ಲಿ ಅಧಿವಕ್ತ ಪರಿಷತ್ ಹಾಗೂ ಯುವ ಬ್ರಿಗೇಡ್ ವತಿಯಿಂದ ವಿವೇಕಾನಂದರ ಜಯಂತಿಯನ್ನು ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ನ್ಯಾಯವಾದಿ, ನೋಟರಿ ಚಿದಾನಂದ ಸಂಭೋಜಿ ಮಾತನಾಡಿ ವಿವೇಕಾನಂದರು ಬದುಕಿದ್ದು ಕಡಿಮೆ ಆದರೆ ಅವರ ಸಾಧನೆ ಅಪಾರ, ಅವರು ಸಂದೇಶಗಳನ್ನು ಯುವ ಜನರು ಪಾಲನೆ ಮಾಡಿದರೆ ಜೀವನದಲ್ಲಿ ಯಶಸ್ಸು ಖಂಡಿತವೆಂದರು. ನಂತರ ಮಾತನಾಡಿದ ನ್ಯಾಯವಾದಿ, ನೋಟರಿ ಸುಶೀಲ ಕುಮಾರ ಪತ್ತಾರ ವಿವೇಕಾನಂದರು ಒಬ್ಬ ಮಹಾನ ಸಂನ್ಯಾಸಿ ಅವರು ಜೀವನದಲ್ಲಿ ಪಾಲನೆ ಮಾಡಿರುವ ತತ್ವ, ಆದರ್ಶಗಳು ಸರ್ವರಿಗೂ ಮಾದರಿ ಎಂದರು. ನ್ಯಾಯವಾದಿ ಕೆಎ ವನಜೋಳ ಅವರು ಮಾತನಾಡಿ ನಗರದಲ್ಲಿ ವಿವೇಕಾನಂದರ ವ್ರತ್ತ ನಿರ್ಮಿಸಲು 51000 ರೂ ದಾನವಾಗಿ ನೀಡುವುದಾಗಿ ವಾಗ್ದಾನ ಮಾಡಿದರು.
ಈ ಸಂದರ್ಭದಲ್ಲಿ ಕೆಎ ಲೋಕಾಪುರ ಕಾಲೇಜಿನ ಪ್ರಾಂಶುಪಾಲ ದೇವರೆಡ್ಡಿ, ನ್ಯಾಯವಾದಿಗಳಾದ ಎಸ್ ಎಸ್ ಸೂರ್ಯವಂಶಿ, ಆರ್ ಎನ್ ದರೂರ, ರಮೇಶ ನಲವಡೆ, ಕಟಾವಿ, ವಿಸಿ ಕಲಮಡಿ, ಸಿದ್ರಾಮ ಪಾಟೀಲ, ಎಸ್ ಆರ್ ಕುಂಬಾರ, ಶ್ರೀಮತಿ ರೇಖಾ ಪಾಟೀಲ, ಶಾರದಾ ಕೊಟ್ಟೂರಮಠ, ಡಿಬಿ ಟಕ್ಕಣ್ಣವರ, ಎನ್ ಶಿಂಧೆ ಸೇರಿದಂತೆ ಲೋಕಾಪುರ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.