ಕಟೀಲು :
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಅಭಿನಯದ ‘ಸಲಾರ್’ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಪ್ರಭಾಸ್ ಜೊತೆಗೆ ಚಿತ್ರತಂಡ ರಾಜ್ಯದ ಪುಣ್ಯಕ್ಷೇತ್ರ ದಕ್ಷಿಣ ಕನ್ನಡದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದೆ.
ಮಂಗಳೂರಿಗೆ ಸಮೀಪದಲ್ಲಿರುವ ಈ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ವೈರಲ್ ಆಗುತ್ತಿವೆ.
ನಟ ಪ್ರಭಾಸ್ ಅವರು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಮಲ್ಲಿಗೆ ಹೂವು ಅರ್ಪಿಸಿದ್ದಾರೆ. ಕಟೀಲು ಕ್ಷೇತ್ರದ ಅರ್ಚಕರು ದೇವಸ್ಥಾನದ ವತಿಯಿಂದ ದುರ್ಗೆಯ ಫೋಟೋ ನೀಡಿ ಚಿತ್ರ ನಟನಿಗೆ ಗೌರವಿಸಿದ್ದಾರೆ. ನಿರ್ಮಾಪಕ ವಿಜಯ ಕಿರಂಗದೂರು ಕಟೀಲು ದೇವಿಯ ಪರಮಭಕ್ತರು. ಅವರು ಆಗಾಗ ಈ ದೇವಸ್ಥಾನಕ್ಕೆ ಬರುತ್ತಿರುತ್ತಾರೆ. ಈಗ ಪ್ರಭಾಸ್ ಅವರನ್ನು ಮೊದಲ ಬಾರಿಗೆ ಕಟೀಲಿಗೆ ಕರೆತಂದಿದ್ದಾರೆ.