ಬೆಳಗಾವಿ:
ಕೇಂದ್ರದ ಮಾಜಿ ಸಚಿವ ದಿ.ಸುರೇಶ ಅಂಗಡಿಯವರ ಜಿಲ್ಲಾಧ್ಯಕ್ಷರಿದ್ದಾಗ ಜಿಲ್ಲಾ ಯುವ ಮೋರ್ಚಾ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದ ಸುಭಾಷ ಪಾಟೀಲ ಇಂದು ಬೆಳಗಾವಿಯ 8 ವಿಧಾನಸಭಾ ಕ್ಷೇತಗಳ 9 ಮಂಡಲಗಳನ್ನು ಒಳಗೊಂಡ ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮೂಡಲಗಿ ತಾಲೂಕಿನ ಒಬ್ಬ ರೈತನ ಮಗನಾಗಿ ಜಿಲ್ಲೆಯ ಗಡಿಭಾಗದ ಮೂಡಲಗಿ ತಾಲೂಕಿನ ಅವರಾದಿಯಂಥ ಚಿಕ್ಕ ಗ್ರಾಮದಿಂದ ಬಂದ ಯುವ ಉತ್ಸಾಹಿ 44 ವರ್ಷದ ಯುವಕ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಲು ಸನ್ನದ್ದನಾಗಿದ್ದಾರೆ.

ಈ ಮುಂಚೆ ಅರಭಾಂವಿ ಮಂಡಲ ಪ್ರಧಾನ ಕಾರ್ಯದರ್ಶಿ, ಮಂಡಲ‌ ಅಧ್ಯಕ್ಷರಾಗಿ, ಜಿಲ್ಲಾ ಕಾರ್ಯದರ್ಶಿಯಾಗಿ,ಪ್ರಸಕ್ತ ಅವಧಿಯ ಪ್ರಧಾನ ಕಾರ್ಯದರ್ಶಿಯಾಗಿ ಮುಂದಿನ ಅವಧಿಯಲ್ಲಿ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಯುವಕರಲ್ಲಿ ನವ ಉತ್ಸಾಹ ತುಂಬಿದೆ. ಸಂಘಟನಾ ಚತುರ ಸುಭಾಷ ಪಾಟೀಲರಿಗೆ ಬಿಜೆಪಿ ಪದಾಧಿಕಾರಿಗಳು, ಕಾರ್ಯಕರ್ತರು ಸತ್ಕಾರ ಮಾಡಿ ಸಂಜಯ ಪಾಟೀಲರ ಅವಧಿಯಲ್ಲಿ ಎಲ್ಲ ವಿಭಾಗಗಳಲ್ಲಿ ರಾಜ್ಯದಲ್ಲಿ ಅತ್ಯತ್ತಮ ಸ್ಥಾನದಲ್ಲಿರಲು ಎಲ್ಲರ ಪರಿಶ್ರಮದಂತೆ ತಮ್ಮ ಅವಧಿಯಲ್ಲಿ ಪಕ್ಷ ಮತ್ತಷ್ಟು ಬಲಿಷ್ಠವಾಗಲಿ ಎಂದು ಶುಭ ಹಾರೈಸಿದ್ದಾರೆ.

ಜಿಲ್ಲಾ ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ಮಾಧ್ಯಮ ಸಂಚಾಲಕ ‌ಎಫ್.ಎಸ್.ಸಿದ್ದನಗೌಡರ, ಜಿಲ್ಲಾ ಎಸ್ಸಿ ಮೋರ್ಚಾ ಅಧ್ಯಕ್ಷ ಯಲ್ಲೇಶ ಕೋಲಕಾರ, ಜಿಲ್ಲಾ ಯುವ ಮೊರ್ಚಾ ಪ್ರಧಾನ ಕಾರ್ಯದರ್ಶಿ ಸಚಿನ‌ ಪಾಟೀಲ, ಸವದತ್ತಿ ಮಂಡಲ‌‌ ಅಧ್ಯಕ್ಷ ಈರಣ್ಣ ಚಂದರಗಿ, ಗ್ರಾಮೀಣ ಮತಕ್ಷೇತ್ರದ ಅಧ್ಯಕ್ಷ ಧನಂಜಯ ಜಾಧವ, ಕಾಡಪ್ಪ‌ ವೀರಶೆಟ್ಟಿ, ವೀರಭದ್ರ ಪೂಜಾರ, ಸಂಜಯ ನವಲಗುಂದ ಸತ್ಕರಿಸಿದರು.